#ResignModi ಬ್ಲಾಕ್ ಮಾಡಿದ ಫೇಸ್​​ಬುಕ್​​ ಹೇಳಿದ್ದೇನು?

masthmagaa.com:

ದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ಮುಂದುವರಿದಿದ್ದು, ಜನ ಕೇಂದ್ರ ಸರ್ಕಾರದ ವಿರುದ್ಧ ಕೆಂಡವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಿಸೈನ್ ಮೋದಿ ಅನ್ನೋ ಹ್ಯಾಷ್ ಟ್ಯಾಗ್ ಫುಲ್ ಟ್ರೆಂಡಿಂಗ್​​ನಲ್ಲಿ ಇದೆ. ಆದ್ರೆ ನಿನ್ನೆ ಫೇಸ್​ಬುಕ್ ಈ ಹ್ಯಾಷ್​​ಟ್ಯಾಗ್​​ನ್ನು ಬ್ಲಾಕ್ ಮಾಡಿತ್ತು. ಈ ಹ್ಯಾಷ್​​ಟ್ಯಾಗ್ ರಿಸೈನ್ ಮೋದಿ ಅಂತ ಹಾಕಿ ಸರ್ಚ್ ಮಾಡಿದ್ರೆ, ಈ ಪೋಸ್ಟ್​​ನ್ನು ಹೈಡ್ ಮಾಡಲಾಗಿದೆ. ಇದು ನಮ್ಮ ಕಮ್ಯೂನಿಟಿ ಸ್ಟಾಂಡರ್ಡ್ಸ್​​​ಗೆ ವಿರುದ್ಧವಾಗಿದೆ ಅಂತ ಬರ್ತಾ ಇತ್ತು.

ಫೇಸ್​ಬುಕ್ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಯ್ತು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಹ್ಯಾಷ್​​ಟ್ಯಾಗ್ ಬ್ಲಾಕ್ ಮಾಡಿದ್ದಾರೆ ಅಂತೆಲ್ಲಾ ಆರೋಪ ಕೇಳಿ ಬಂತು. ಫೇಸ್​​ಬುಕ್ ಬಗ್ಗೆ ಟ್ವಿಟ್ಟರ್​ನಲ್ಲಿ ಟೀಕೆಗಳ ಸುರಿಮಳೆಯಾಯ್ತು. ವಿವಾದ ಜೋರಾದ ಕೂಡಲೇ ಬ್ಲಾಕ್​ ತೆರವುಗೊಳಿಸಿ ಪ್ರತಿಕ್ರಿಯಿಸಿದ ಫೇಸ್​​ಬುಕ್​, ಅದು ಮಿಸ್ ಆಗಿ ಬ್ಲಾಕ್ ಆಗಿದ್ದು.. ಬ್ಲಾಕ್ ಮಾಡಿ ಅಂತ ನಮಗೆ ಕೇಂದ್ರ ಸರ್ಕಾರ ಹೇಳಿಲ್ಲ ಅಂತ ಸ್ಪಷ್ಟಪಡಿಸಿದೆ.

-masthmagaa.com

Contact Us for Advertisement

Leave a Reply