ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ! ಭುಗಿಲೆದ್ದ ಆಕ್ರೋಶ!

masthmagaa.com:

ಗುಜರಾತ್‌ನ ಬಿಲ್ಕಿಸ್‌ ಬಾನೊ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನ ಬಿಡುಗಡೆ ಮಾಡಿರೋದು ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗ್ತ ಇದೆ. ತೆಲಂಗಾಣ ಸಿಎಂ ಕೆ. ಸಿ ಆರ್‌ ಮಗ ಸಚಿವ ಕೆಟಿ ರಾಮ ರಾವ್‌ ಕಿಡಿಕಾರಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯಂದು ಮಹಿಳೆಯರನ್ನ ಗೌರವಿಸುವ ಬಗ್ಗೆ ಮಾತನಾಡಿದ್ರು. ಆ ಮಾತನ್ನ ಅವರು ನಿಜವಾಗಿಯು ಅರ್ಥ ಮಾಡಿಕೊಂಡಿದ್ದಾರಾ? ಅದನ್ನ ನಿಜವಾಗಿಯು ಅರ್ಥ ಮಾಡಿಕೊಂಡ್ರೆ ಪ್ರಧಾನಿಗಳು ಮಧ್ಯೆ ಪ್ರವೇಶಿಸಿ ಗುಜರಾತ್‌ ಸರ್ಕಾರ ನೀಡಿದಈ ಆದೇಶವನ್ನ ಮತ್ತೊಮ್ಮೆ ಪರಿಶೀಲಿಸಬೇಕು ಅಂತ ಆಗ್ರಹ ಮಾಡಿದ್ದಾರೆ. ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿ ʻಪ್ರಧಾನಿಯವರ ಕಾರ್ಯ ಮತ್ತು ಮಾತಿನಲ್ಲಿ ಎಷ್ಟು ವ್ಯತ್ಯಾಸ ಇದೆ ಅನ್ನೋದನ್ನ ಇಡೀ ದೇಶವೆ ನೋಡ್ತಾ ಇದೆ ಅಂತ ಚಾಟಿ ಬೀಸಿದ್ದಾರೆ.

-masthmagaa.com

Contact Us for Advertisement

Leave a Reply