ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದದಿಂದ ಹೊರಬರಲಿದೆ ಬ್ರಿಟನ್‌! ಕಾರಣವೇನು?

masthmagaa.com:

ಬ್ರಿಟನ್‌ನಲ್ಲಿ ಹೆಚ್ಚಾಗ್ತಿರೋ ಅಕ್ರಮ ವಲಸೆ ಸಮಸ್ಯೆಯನ್ನ ಪರಿಹರಿಸೋಕೆ ಈಗಾಗಲೇ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮತ್ತು ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್‌ಮನ್‌ ಕೆಲ ಕ್ರಮ ಕೈಗೊಳ್ಳೋಕೆ ಮುಂದಾಗಿದ್ದಾರೆ. ಅಕ್ರಮ ವಲಸಿಗರ ಸಮಸ್ಯೆಯನ್ನ ಬಗೆಹರಿಸೋಕೆ ನೂತನ ಕಾನೂನು ಜಾರಿ ಮಾಡೋಕೆ ಮುಂದಾಗಿರೋ ಬ್ರಿಟನ್‌ ಸರ್ಕಾರ, ಯುರೋಪಿಯನ್‌ ಮಾನವ ಹಕ್ಕು ಒಕ್ಕೂಟ ECHRನಿಂದ ಕೂಡ ಹೊರ ಬರೋಕೆ ಯೋಚಿಸ್ತಿದೆ. ಈ ವರ್ಷದಲ್ಲಿ 65 ಸಾವಿರ ವಲಸಿಗರು ಅಕ್ರಮವಾಗಿ ಬ್ರಿಟನ್‌ಗೆ ಬರೋ ಸಾಧ್ಯತೆಯಿದೆ ಅಂತ ಬ್ರಿಟನ್‌ಗೆ ಎಚ್ಚರಿಕೆ ನೀಡಲಾಗಿದೆ. ಹಾಗಾಗಿ ಸುನಾಕ್‌ ಈ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ಅದನ್ನ ಬಗೆಹರಿಸೋಕೆ ಮುಂದಿನ ದಿನಗಳಲ್ಲಿ ಹಲವು ಹೊಸ ಯೋಜನೆಗಳನ್ನ ಪರಿಚಯಿಸಲಿದ್ದಾರೆ. ಒಂದ್‌ ವೇಳೆ ಸುನಾಕ್‌ರ ಈ ಹೊಸ ಯೋಜನೆಗಳನ್ನ ಸ್ಟಾರ್ಸ್‌ಬರ್ಗ್‌ನ ECHR ಕೋರ್ಟ್‌ ಕಾನೂನು ಬಾಹಿರ ಅಂತ ಹೇಳಿದ್ರೆ, ಸುನಾಕ್‌ಗೆ ಜೆನರಲ್‌ ಎಲೆಕ್ಷನ್‌ಗೆ ಕಷ್ಟ ಆಗುತ್ತೆ. ಹೀಗಾಗಿ ಅದಕ್ಕೂ ಮುಂಚೆನೇ ECHRನಿಂದಲೇ ಹೊರ ಬರೋಕೆ ಸುನಾಕ್‌ ತಯಾರಿ ನಡೆಸ್ತಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply