ಆಸ್ಟ್ರೇಲಿಯಾದಲ್ಲಿ ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಉಲ್ಕಾಶಿಲೆ ಪತ್ತೆ!

masthmagaa.com:

ಆಸ್ಟ್ರೇಲಿಯಾದಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಗೆ ಅಪರೂಪದ ಬಂಡೆಯೊಂದು ಸಿಕ್ಕಿದ್ದು, ಅದು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳುತ್ತೆ ಅಂತ ವರದಿಯಾಗಿದೆ. 2015ರಲ್ಲಿ ಗೋಲ್ಡ್‌ಗಾಗಿ ನೆಲ ಕೊರೆಯೋ ವೇಳೆ ಈ ಬಂಡೆ ಸಿಕ್ಕಿದ್ದು ಅತ್ಯಂತ ಗಟ್ಟಿಯಾಗಿತ್ತು. ಇದನ್ನು ಬ್ರೇಕ್‌ ಮಾಡೋಕೆ ಸಾಧ್ಯ ಆಗ್ಲಿಲ್ಲ ಅಷ್ಟೊಂದು ಕಠಿಣ ಬಂಡೆಯಾಗಿತ್ತು ಅಂತ ವ್ಯಕ್ತಿ ಹೇಳಿದ್ದಾರೆ. ಕೆಲ ವರ್ಷಗಳ ನಂತರ ಇದು ಒಂದು ಅಪರೂಪದ ಉಲ್ಕಾಶಿಲೆ ಅಂದ್ರೆ ಬಾಹ್ಯಾಕಾಶದಿಂದ ಭೂಮಿಗೆ ಬಿದ್ದ ಕಲ್ಲು ಅಥ್ವಾ ಲೋಹದ ತುಂಡು ಅಂತ ತಿಳಿದು ಬಂದಿದೆ. ಈಗ ಇದನ್ನ ಮೇರಿಬರೋ(Maryborough) ಉಲ್ಕಾಶಿಲೆ ಅಂತ ಕರೆಯಲಾಗುತ್ತಿದೆ. ಇದು ಭೂಮಿಯ ಬಂಡೆಗಳಿಗಿಂತ ಭಿನ್ನವಾಗಿದೆ ಹಾಗೂ ಕಬ್ಬಿಣ ಮತ್ತು ನಿಕ್ಕಲ್‌ನಿಂದ ಕೂಡಿದೆ. ಅಂದ್ಹಾಗೆ ಈ ಉಲ್ಕಾಶಿಲೆ 4.6 ನೂರು ಕೋಟಿ ವರ್ಷಗಳಷ್ಟು ಹಳೆಯದು ಅಂತ ವಿಜ್ಞಾನಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply