ರೋಹಿತ್ ಶರ್ಮಾ ಸಾಲು ಸಾಲು ಸಾಧನೆ..!

ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾಗೆ 395 ರನ್‍ಗಳ ಟಾರ್ಗೆಟ್ ನೀಡಿದೆ. 4ನೇ ದಿನದಾಟದಂತ್ಯಕ್ಕೆ ಸೌತ್ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 11 ರನ್ ಕಲೆಹಾಕಿದೆ. ನಾಳೆಯ ಕೊನೆಯ ದಿನವಾಗಿದ್ದು ಹರಿಣಗಳ ಗೆಲುವಿಗೆ 384 ರನ್‍ಗಳು ಬೇಕಿದೆ.

ವಿಷ್ಯ ಇದಲ್ಲ. 2ನೇ ಇನ್ನಿಂಗ್ಸ್‍ನಲ್ಲೂ ಅಬ್ಬರದಾಟ ಆಡಿದ ರೋಹಿತ್ ಶರ್ಮಾ ಸಾಲು ಸಾಲು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೊದಲ ಇನ್ನಿಂಗ್ಸ್‍ನಲ್ಲಿ 176 ರನ್ ಸಿಡಿಸಿದ್ದ ರೋಹಿತ್ ಶರ್ಮಾ, 2ನೇ ಪಂದ್ಯದಲ್ಲಿ 127 ರನ್ ಸಿಡಿಸಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲಿ 2 ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 1978-79ರಲ್ಲಿ ಸುನೀಲ್ ಗವಾಸ್ಕರ್ ಈ ಸಾಧನೆ ಮಾಡಿದ್ದರು. ಜೊತೆಗೆ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಜೊತೆಗೆ ಆರಂಭಿಕ ಬ್ಯಾಟ್ಸ್‍ಮನ್ ಆಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ 2 ಇನ್ನಿಂಗ್ಸ್‍ನಲ್ಲಿ ಶತಕ ಸಿಡಿಸಿದ ಏಕೈಕ ಆಟಗಾರ ಎನ್ನಿಸಿಕೊಂಡಿದ್ದಾರೆ.

Contact Us for Advertisement

Leave a Reply