ರೋಜ್‌ಗಾರ ಮೇಳ: 71 ಸಾವಿರ ನೌಕರರಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ

masthmagaa.com:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರೋಜಗಾರ್‌ ಮೇಳದಲ್ಲಿ ಪ್ರಧಾನಿ ಮೋದಿ ಇಂದು ಹೊಸದಾಗಿ ನೇಮಕಗೊಂಡ ನೌಕರರಿಗೆ 71 ಸಾವಿರ ನೇಮಕಾತಿ ಪತ್ರಗಳನ್ನ ಹಸ್ತಾಂತರಿಸಿದ್ದಾರೆ. ವರ್ಚುವಲ್‌ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಶಿಕ್ಷಕರು, ನರ್ಸ್‌, ಫಾರ್ಮಾಸಿಸ್ಟ್‌, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರದ 71 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ಹಸ್ತಾಂತರ ಮಾಡಿದ್ದಾರೆ. ಅಲ್ಲದೇ ನೇಮಕಗೊಂಡ ನೌಕರರಿಗೆ ಆನ್‌ಲೈನ್‌ನಲ್ಲಿ ತರಬೇತಿ ನೀಡೊ ʻಕರ್ಮಯೋಗಿ ಪ್ರಾರಂಭ್‌ʼ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದಾರೆ. ಅಂದ್ಹಾಗೆ ಕಳೆದ ಅಕ್ಟೋಬರ್‌ನಲ್ಲಿ ಸಹ ಮೋದಿ 75 ಸಾವಿರ ಜನರಿಗೆ ನೇಮಕಾತಿ ಪತ್ರಗಳನ್ನ ವಿತರಿಸಿದ್ರು.

-masthmagaa.com

Contact Us for Advertisement

Leave a Reply