ಮುಸ್ಲಿಂ ಜನಸಂಖ್ಯೆ, ಡ್ರಗ್ಸ್​, ತಾಲಿಬಾನ್ ಬಗ್ಗೆ RSS​​ ಮುಖ್ಯಸ್ಥ ಹೇಳಿದ್ದೇನು?

masthmagaa.com:

ಆರ್​ಎಸ್​​ಎಸ್​​​ಗೆ ಇವತ್ತು 96ನೇ ಹುಟ್ಟುಹಬ್ಬ. ಜೊತೆಗೆ ವಿಜಯದಶಮಿ ಹಬ್ಬ.. ಇದ್ರ ಅಂಗವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್​ಎಸ್​​​ಎಸ್​​​ ಮುಖ್ಯಸ್ಥ ಮೋಹನ್ ಭಾಗವತ್​​ ದೇಶದ ಕೆಲವೊಂದು ಪರಿಸ್ಥಿತಿಗಳ ಕುರಿತು ಇವತ್ತು ಮಾತಾಡಿದ್ದಾರೆ. ಒಟಿಟಿ ಪ್ಲಾಟ್​ಫಾರ್ಮ್​​ಗಳಲ್ಲಿ ಏನೇನೋ ತೋರಿಸಲಾಗ್ತಿದೆ. ಅದಕ್ಕೆ ಯಾವುದೇ ನಿಯಂತ್ರಣ ಇಲ್ಲ.. ಕೊರೋನಾದಿಂದಾಗಿ ಮಕ್ಕಳ ಕೈಗೂ ಮೊಬೈಲ್ ಬಂದಿದೆ. ಅವರು ಅದ್ರಲ್ಲಿ ಏನೇನ್ ನೋಡ್ತಾರೆ ಅನ್ನೋದು ಕೂಡ ನಮಗೊತ್ತಿಲ್ಲ ಅಂದ್ರು. ಜೊತೆಗೆ ದೇಶದಲ್ಲಿ ನಶೆ ಪದಾರ್ಥಗಳ ಬಳಕೆ ಹೆಚ್ಚಾಗ್ತಿದೆ. ಇದ್ರಿಂದ ಬಂದ ದುಡ್ಡು ದೇಶ ವಿರೋಧಿ ಚಟುವಟಿಕೆಗಳಿಗೆ ಹೋಗ್ತಿದೆ. ಇದನ್ನು ನಿಯಂತ್ರಿಸೋದು ಅನಿವಾರ್ಯ ಅಂದ್ರು. ಬಿಟ್​​ಕಾಯಿನ್​ನಂತರ ರಹಸ್ಯವಾದ ಕರೆನ್ಸಿ ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸಬಹುದು. ಜಾಗತಿಕ ಹಿತಾಸಕ್ತಿಗಳು ದೇಶದ ಪ್ರಗತಿಯನ್ನು ತಡೆಯೋ ಉದ್ದೇಶ ಹೊಂದಿವೆ ಅಂತ ಕೂಡ ಕಿರಿಕಾರಿದ್ರು. ಇದೇ ವೇಳೆ ತಾಲಿಬಾನಿಗಳ ವಿಚಾರ ತೆಗೆದ ಮೋಹನ್ ಭಾಗವತ್​, ನಮಗೆ ತಾಲಿಬಾನ್ ಹಿಸ್ಟರಿ ಚೆನ್ನಾಗಿ ಗೊತ್ತು. ಅಂಥಹ ತಾಲಿಬಾನ್​ಗೆ ಪಾಕಿಸ್ತಾನ, ಚೀನಾ ಬೆಂಬಲ ಕೊಡ್ತಿದೆ. ತಾಲಿಬಾನ್ ಬದಲಾದ್ರೂ ಪಾಕ್ ಬದಲಾಗಲ್ಲ. ಭಾರತದ ವಿಚಾರವಾಗಿ ಚೀನಾದ ಉದ್ದೇಶ ಕೂಡ ಬದಲಾಗೋದಿಲ್ಲ. ಹೀಗಾಗಿ ನಾವು ಗಡಿಯನ್ನು ಬಲಿಷ್ಠಗೊಳಿಸಬೇಕು ಮತ್ತು ಎಚ್ಚರವಾಗಿ, ತಯಾರಾಗಿ ಇರಬೇಕು ಅಂತ ಹೇಳಿದ್ರು. ಇನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಹಿಂದೂಗಳನ್ನು ಗುರಿಯಾಗಿಸಿ ದಾಳಿ ಮಾಡೋಕೆ ಶುರು ಮಾಡಿದ್ದಾರೆ. ಸರ್ಕಾರ ಇದನ್ನು ತಡೆಯಬೇಕು, ಉಗ್ರರನ್ನು ನಿಗ್ರಹಿಸಬೇಕು ಅಂತ ಕರೆ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ಶಿವಸೇನೆ ನಾಯಕ ಸಂಜಯ್ ರಾವತ್​​, ನೋಟು ನಿಷೇಧದ ನಂತರ ಮಾದಕ ವಸ್ತು ದಂಧೆ ಅಂತ್ಯವಾಗುತ್ತೆ ಅಂತ ಪ್ರಧಾನಿ ಮೋದಿ ಹೇಳಿದ್ರು. ಆದ್ರೆ ಇವತ್ತಿಗೂ ಅದು ಸಾಧ್ಯವಾಗಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply