RSS- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸ ನಿಮಗೆ ಗೊತ್ತಾ..?

ಹಾಯ್ ಫ್ರೆಂಡ್ಸ್..RSS..ಕೆಲವರು ದೇಶಸೇವೆಯ ಸಂಘಟನೆ ಅಂದ್ರೆ ಇನ್ ಕೆಲೋರು ಕೋಮುವಾದಿ ಸಂಘಟನೆ ಅಂತಾರೆ. ಇದು ದೇಶಕ್ಕಾಗಿ ಹೋರಾಡಿದೆ ಅನ್ನೋ ವಾದದ ಜೊತೆ ಬ್ರಿಟಿಷರ ಜೊತೆಯೇ ಸೇರಿಕೊಂಡಿದ್ರು ಅನ್ನೋ ಆರೋಪಗಳಿವೆ. ಹಾಗಾದ್ರೆ RSS ಇತಿಹಾಸ ಏನು..? RSS ಸ್ಥಾಪನೆ ಉದ್ದೇಶ ಏನು..? ಆರ್ ಎಸ್ ಎಸ್ ಚುನಾವಣೆ ಯಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರ್ತಿರೋದು ಹೇಗೆ..? ನಿಮಗೆ ಎಲ್ಲೂ ಸಿಗದ ರೋಚಕ ಸತ್ಯಸಂಗತಿಯನ್ನ ನಾವ್ ನಿಮಗೆ ಹೇಳ್ತಾ ಹೋಗ್ತೀವಿ.. ಕೊನೆಯವರೆಗೂ ಓದಿ..

2014…ಪ್ರಧಾನಿಯಾಗಿ ಮೋದಿ ಪ್ರಮಾಣವಚನ..!
2019… 2ನೇ ಬಾರಿಗೆ ಪ್ರಧಾನಿಯಾಗಿ ನಮೋ ಪ್ರಮಾಣ..!
2014ರಲ್ಲಿ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಗೆದ್ದು ಇತಿಹಿಸ ಬರೀತು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿ ಸ್ವಂತ ಬಲದಿಂದ ಅಧಿಕಾರಕ್ಕೇರಿತು. ಅದೇ ರೀತಿ 2019ರಲ್ಲೂ ಮತ್ತಷ್ಟು ಸ್ಥಾನ ಗೆದ್ದು ಹೊಸ ದಾಖಲೆ ಬರೀತು. ಈ ಅಭೂತ ಪೂರ್ವ ಗೆಲುವಿಗೆ ಮೋದಿ ಅಲೆ, ಕಾರ್ಯಕರ್ತರ ಶ್ರಮದ ಜೊತೆ ಇನ್ನೊಂದು ಶಕ್ತಿ ಕೂಡ ಕೆಲಸ ಮಾಡಿತ್ತು. ಅದೇ RSS..ಈ RSS ನ ಇತಿಹಾಸವೇ ರೋಚಕ..

ಫ್ರೆಂಡ್ಸ್..ಅದು ಬ್ರಿಟಿಷರ ದಾಸ್ಯದಲ್ಲಿ ಭಾರತಾಂಬೆ ನಲುಗಿ ಹೋಗಿದ್ದ ಕಾಲ.. ಬ್ರಿಟಿಷರ ವಿರುದ್ಧ ಧನಿಯೆತ್ತಲು ಎಲ್ಲರೂ ಭಯಪಡ್ತಿದ್ದ ದಿನಗಳು.. ಆಗ ಡಾ ಕೇಶವ್ ಬಲಿರಾಮ್ ಹೆಡಿಗೇವರ್ ಎಂಬುವವರು ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಗ್ಗೂಡಿಸೋಕೆ ಒಂದು ಸಂಘ ಕಟ್ತಾರೆ. ಅದೇ RSS.. 1925ರ ಸೆಪ್ಟೆಂಬರ್ 25ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದ ಮೊಹಿತೇವಾಡದಲ್ಲಿ ಚಿಕ್ಕದಾಗಿ ಈ ಸಂಘ ಶುರುವಾಯ್ತು..

ಅಪ್ರತಿಮ ದೇಶಭಕ್ತ ಕೇಶವ್ ಹೆಡಿಗೇವರ್..!
ಹೌದು..RSS ಸ್ಥಾಪಿಸಿದ ಕೇಶವ್ ಬಲಿರಾಮ್ ಹೆಡಿಗೇವರ್ ಅಪ್ರತಿಮ ದೇಶಭಕ್ತಿ ಹೊಂದಿದ್ರು. ವೈದ್ಯಕೀಯ ಶಿಕ್ಷಣ ಪಡೆದಿರೋ ಇವರನ್ನ ಡಾಕ್ಟರ್ ಜೀ ಅಂತಲೂ ಕರೆಯಲಾಗುತ್ತೆ . ಇವರ ದೇಶಭಕ್ತಿ ಹೇಗಿತ್ತು ಅಂದ್ರೆ ಶಾಲಾದಿನಗಳಲ್ಲಿದ್ದಾಗ ಬ್ರಿಟಿಷರು ವಂದೇ ಮಾತರಂ ಘೋಷಣೆ ನಿಷೇಧಿಸಿದ್ರು. ಆದ್ರೆ ಹೆಡಿಗೇವರ್ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಸ್ಕೂಲ್ ಇನ್ ಸ್ಪೆಕ್ಟರ್ ರನ್ನು ವಂದೇ ಮಾತರಂ ಘೋಷಣೆಯೊಂದಿಗೆ ಸ್ವಾಗತಿಸಿ ಸಂಘಟನಾ ಚಾತುರ್ಯ ಪ್ರದರ್ಶಿಸಿದ್ರು. ಕೋಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಓದುವಾಗ ದಾಮೋದರ ನದಿಯಲ್ಲಿ ಪ್ರವಾಹ ಬಂದಿತ್ತು. ಆಗ ರಾಮಕೃಷ್ಣ ಆಶ್ರಮದ ಜೊತೆ ಸೇರಿ ಪ್ರವಾಹ ಸಂತ್ರಸ್ತರ ಸೇವೆ ಮಾಡಿದ್ರು. ಇದು ಕೇವಲ ಉದಾಹರಣೆಗಳಷ್ಟೆ ಇಂಥವು ಬಹಳಷ್ಟಿವೆ..

ವೈದ್ಯಕೀಯ ಶಿಕ್ಷಣ ಪಡೆದಿದ್ರೂ ದೇಶಸೇವೆಗೆ ನಿರ್ಧಾರ..!
ಕೇಶವ್ ಹೆಡಿಗೇವರ್ ವೈದ್ಯಕೀಯ ಶಿಕ್ಷಣ ಪಡೆದು ನಾಗ್ ಪುರ್ ಗೆ ವಾಪಸ್ ಬಂದಾಗ ಅಲ್ಲಿ ವೈದ್ಯ ಕೊರತೆ ಇತ್ತು. ಅವರು ಮನಸ್ಸು ಮಾಡಿದ್ರೆ ಸುಖಮಯ ಜೀವನ ನಡೆಸಿಕೊಂಡು ಆರಾಮಾಗಿ ಇರಬಹುದಿತ್ತು.. ಆದ್ರೆ ಅವರು ಸೀದಾ ಪೂನಾಗೆ ಹೋಗಿ ಬಾಲಗಂಗಾಧರ ತಿಲಕರನ್ನು ಭೇಟಿ ಆದ್ರು. ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿ ಜೈಲಿಗೆ ಹೋದ್ರು. ನಂತ್ರ ಹೊರಬಂದ ಹೆಡಿಗೇವರ್ ಯೋಚಿಸಿದ್ದು ಇಷ್ಟೆ.. ಹೀಗೆ ಹೋರಾಡಿದ್ರೆ ಸ್ವಾತಂತ್ರ್ಯ ಬರಲ್ಲ.. ಭಾರತ ಜಾತಿ, ಧರ್ಮ, ಪಂಥ ಹೀಗೆ ವಿಭಜನೆ ಆಗಿದೆ. ದೇಶ ಉಳಿಯಬೇಕಾದ್ರೆ ಒಗ್ಗಟ್ಟು ಅಗತ್ಯ..ಒಗ್ಗಟ್ಟಿಗೆ ಸಂಘಟನೆ ಅಗತ್ಯ ಅಂತ ಯೋಚಿಸಿ RSS ಗೆ ಬುನಾದಿ ಹಾಕಿದ್ರು..

ಪ್ರಚಾರಕ್ ಗಳ ಶ್ರಮ.. ಹೆಮ್ಮರವಾಗಿ ಬೆಳೆದ RSS..!
ಮಹಾರಾಷ್ಟ್ರದಲ್ಲಿ ಆರಂಭವಾದ ಶಾಖೆಯಲ್ಲಿ ತರಬೇತಿ ಪಡೆದ RSS ನಾಯಕರು ದೇಶದ ವಿವಿಧ ಮೂಲೆಗಳಿಗೆ ಹೊಸ ಶಾಖೆಗಳನ್ನು ನಿರ್ಮಿಸಿದ್ರು. ಇವರನ್ನು ಪ್ರಚಾರಕ್ ಗಳು ಅಂತಾ ಕರೆಯಲಾಯ್ತು. ಹೀಗೆ ದೇಶದ ಉದ್ದಗಲಕ್ಕೂ RSS ಬೆಳೀತು. ಇದರ ಸದಸ್ಯರು ಎಲ್ಲವನ್ನೂ ತ್ಯಾಗ ಮಾಡಿ ದೇಶಸೇವೆಗೆ ಜೀವನ ಮುಡಿಪಾಗಿಟ್ಟರು. 1930ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ಹೆಡಿಗೇವರ್ ಭಾಗಿಯಾಗಿದ್ರು. ಆದ್ರೆ RSS ಕಾರ್ಯಕರ್ತರು ಭಾಗಿಯಾಗದಂತೆ ಸೂಚಿಸಿದ್ರು. ಹೀಗಾಗಿ ಕಾಂಗ್ರೆಸ್ ತಮ್ಮ ಕಾರ್ಯಕರ್ತರು RSS ಸೇರಬಾರದು ಅಂತಾ ಫರ್ಮಾನು ಹೊರಡಿಸಿತು. 1940ರಲ್ಲಿ ಹೆಡಿಗೇವರ್ ನಿಧನದ ನಂತರ ಗೋಲ್ವಾಲ್ಕರ್ RSS ನೇತೃತ್ವ ವಹಿಸಿದ್ರು. ಇವರನ್ನು ಗುರೂಜಿ ಅಂತಲೂ ಕರೆಯಲಾಗುತ್ತಿತ್ತು. ಈಗ ಮೋಹನ್ ಭಾಗವತ್ RSSನ ರಾಷ್ಟ್ರೀಯ ಸರಸಂಘಚಾಲಕರಾಗಿದ್ದಾರೆ.

ಮಹಿಳೆಯರಿಗಾಗಿ ರಾಷ್ಟ್ರೀಯ ಸೇವಿಕಾ ಸಮಿತಿ..!
ಮೊದಲಿಗೆ ಕೇವಲ ಪುರುಷರನ್ನೊಳಗೊಂಡ ಸಂಘಟನೆ ಸ್ಥಾಪಿಸಲಾಗಿತ್ತು. ನಂತ್ರ 1936ರ ಅಕ್ಟೋಬರ್ 25ರಂದು ಲಕ್ಷ್ಮಿ ಭಾಯ್ ಕೇಲ್ಕರ್ ನೇತೃತ್ವದಲ್ಲಿ ರಾಷ್ಟ್ರೀಯ ಸೇವಿಕಾ ಸಮಿತಿ ಸ್ಥಾಪಿಸಲಾಯ್ತು. ಇಲ್ಲಿ ಯುವತಿಯರಿಗೆ ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಶಿಕ್ಷಣ ಕೊಡಲಾಗುತ್ತೆ. ಈ ಮೂಲಕ ಆತ್ಮವಿಶ್ವಾಸ ಮತ್ತು ದೇಶಭಕ್ತಿಯನ್ನು ಜಾಗೃತಗೊಳಿಸಲಾಗ್ತಿದೆ.

ಇಷ್ಟೇ ಅಲ್ಲ..ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾ ಭಾರತಿ, ವಿದ್ಯಾರ್ಥಿಗಳ ಸಂಘಟನೆಗಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿಚಾರವಂತರಿಗೆ ವಿಚಾರ ಕೇಂದ್ರ, ಕಲಾ ರಂಗದಲ್ಲಿ ಸಂಸ್ಕಾರ ಭಾರತಿ, ಸಾಹಿತ್ಯ ಮತ್ತು ಪುಸ್ತಕ ಮುದ್ರಣ ವಿಭಾಗದಲ್ಲಿ ರಾಷ್ಟ್ರೋತ್ಥಾನ ಪರಿಷತ್, ಹೋರಾಟಕ್ಕಾಗಿ ವಿಶ್ವ ಹಿಂದೂ ಪರಿಷತ್ – ಬಜರಂಗದಳ, ರಾಜಕೀಯಕ್ಕಾಗಿ ಬಿಜೆಪಿ, ಸ್ವದೇಶಿ ವಸ್ತು ಬಳಕೆ ಬಗ್ಗೆ ಜಾಗೃತಿಗಾಗಿ ಜಾಗರಣ ಮಂಚ್, ರೈತಪರ ಹೋರಾಟಕ್ಕೆ ಭಾರತೀಯ ಕಿಸಾನ್ ಸಂಘ, ಕಾರ್ಮಿಕ ಹೋರಾಟಕ್ಕೆ ಭಾರತೀಯ ಮಜ್ದೂರ್ ಸಂಘ, ಕಾಡು ಜನರ ಹಿತದೃಷ್ಟಿಯಿಂದ ವನ್ಯವಾಸಿ ಕಲ್ಯಾಣ ಆಶ್ರಮಗಳಿವೆ. ಎಲ್ಲವನ್ನೂ ಸೇರಿ ಸಂಘಪರಿವಾರ ಅಂತ ಕರೆಯಲಾಗುತ್ತೆ.

RSS ಸಾಧನೆ ಏನು..?
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಮತ್ತು ಏಕೀಕೃತ ಭಾರತಕ್ಕಾಗಿ ಹೋರಾಡಿದ್ದ RSS ನಂತರ ಸಮಾಜ ಸೇವೆಯಲ್ಲಿ ತೊಡಗಿದೆ. ಅದು ಭೂಕಂಪ , ಸುನಾಮಿಯಂತ ಪ್ರಕೃತಿ ವಿಕೋಪದ ಇರಬಹುದು..ಯುದ್ಧ ಇರಬಹುದು…ತಮ್ಮದೇ ಆದ ಸೇವೆಯನ್ನು ನೀಡುತ್ತಾ ಬಂದಿದೆ RSS..2004ರಲ್ಲಿ ಸುನಾಮಿ ಅಪ್ಪಳಿಸಿದಾಗ ತಮಿಳುನಾಡಿನಲ್ಲಿ ಜೀವದ ಹಂಗು ತೊರೆದು ಸೇವೆಗೆ ನಿಂತಿದ್ದು, 1971ರ ಯುದ್ಧದ ಸಂದರ್ಭದಲ್ಲಿ ದೇಶಾದ್ಯಂತ ರಕ್ತದಾನ ಶಿಬಿರ ನಡೆಸಿ ಯೋಧರಿಗೆ ಸಹಾಯ ಮಾಡಿದ್ದು ಇದೇ RSS.. ಅಲ್ಲದೆ 2001ರಲ್ಲಿ ಗುಜರಾತಿನಲ್ಲಿ ಭೂಕಂಪನ ಸಂಭವಿಸಿದಾಗ ಜೀವದ ಹಂಗು ತೊರೆದು ಸೇವೆ ಮಾಡಿದ್ರು.

4 ಬಾರಿ ನಿಬರ್ಂಧಕ್ಕೊಳಗಾಗಿರುವ RSS..!
ಹೌದು..ದೇಶ ಸೇವೆಗಾಗಿ ಸ್ಥಾಪನೆಯಾದ RSS ತನ್ನದೇ ದೇಶದಲ್ಲಿ 4 ಬಾರಿ ನಿಷೇಧಕ್ಕೊಳಗಾಗಿದೆ. ಬ್ರಿಟಿಷರ ಅವಧಿಯಲ್ಲಿ ಒಂದು ಬಾರಿ ಮತ್ತು ಸ್ವಾತಂತ್ರ್ಯ ಬಂದ ನಂತರ 3 ಬಾರಿ ನಿಬರ್ಂಧಕ್ಕೆ ಒಳಗಾಗಿದೆ. 1948ರ ಜನವರಿ 30ರಂದು ಗಾಂಧೀಜಿ ಹತ್ಯೆ ನಡೆದಾಗ RSS ಮೇಲೆ ಆಪಾದನೆ ಹೊರಿಸಿ ನಿಬರ್ಂಧ ಹೇರಲಾಗಿತ್ತು. ಆದ್ರೆ ನಂತರ 1949ರ ಜುಲೈ 12ರಂದು ಈ ನಿಬರ್ಂಧವನ್ನು ತೆರವುಗೊಳಿಸಲಾಯ್ತು. ನಂತ್ರ ಪುನಹ 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ನಿಷೇಧ ಹೇರಲಾಗಿತ್ತು. ಅಲ್ಲದೇ ಸಾವಿರಾರು ಕಾರ್ಯಕರ್ತರನ್ನು ಜೈಲಿಗೆ ತಳ್ಳಲಾಯ್ತು. 1992ರಲ್ಲಿ ಬಾಬ್ರಿ ಮಸೀದಿ ಮೇಲೆ ದಾಳಿ ನಡೆದಾಗಲೂ ಸಂಘದ ಮೇಲೆ ನಿಷೇಧ ಹೇರಲಾಗಿತ್ತು.

ಒಟ್ನಲ್ಲಿ ಜಾತಿ ಧರ್ಮದ ಆಧಾರದಲ್ಲಿ ಚದುರಿಹೋಗಿರೋ ಸಮಾಜವನ್ನು ದೇಶ, ಸಂಸ್ಕೃತಿ ಹೆಸರಿನಲ್ಲಿ ಒಂದು ಮಾಡಲು RSS ಪ್ರಯತ್ನಿಸುತ್ತಿದೆ. ಅಲ್ದೆ ಈಗ ವಿಶ್ವದ ಅತಿದೊಡ್ಡ ಸ್ವಯಂ ಸೇವಕ ಸಂಘಟನೆ ಅನ್ನೋ ಖ್ಯಾತಿ ಪಡೆದಿದೆ. ಅಲ್ಲದೆ ಪ್ರತೀ ಚುನಾವಣೆಯಲ್ಲಿ ವರ್ಷಕ್ಕೂ ಮುನ್ನವೇ ಫೀಲ್ಡಿಗಿಳಿಯೋ ಆರ್ ಎಸ್ ಎಸ್, ಅದ್ಬುತವಾಗಿ ಬಿಜೆಪಿ ಪರ ಸಂಘಟಿಸುತ್ತೆ. 2025ಕ್ಕೆ RSS ಶತಮಾನೋತ್ಸವ ಆಚರಿಸಲಿದೆ.

Contact Us for Advertisement

Leave a Reply