RSS ಹಾಗೂ ಮುಸ್ಲಿಂ ಮುಖಂಡರ ಕ್ಲೋಸ್ಡ್‌ ಡೋರ್‌ ಮೀಟಿಂಗ್‌!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ RSSನ ಹಿರಿಯ ಮುಖಂಡರು ಮುಸ್ಲಿಂ ಸಮುದಾಯದ ಜೊತೆ 2ನೇ ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಬಾರಿ ದಿಲ್ಲಿಯ‌ ಮಾಜಿ ಲೆಫ್ಟಿನೆಂಟ್‌ ಗವರ್ನರ್ ನಜೀಬ್‌ ಜಂಗ್‌ ಅವರ ನಿವಾಸದಲ್ಲಿ ಇತರ ಮುಸ್ಲಿಂ ನಾಯಕರೊಂದಿಗೆ ಗುಪ್ತ ಮಾತುಕತೆ ನಡೆಸಿದ್ದಾರೆ. ಈ ವೇಳೆ ದ್ವೇಷ ಭಾಷಣ, ಗುಂಪು ಗಲಾಟೆ, ಬುಲ್ಡೋಜರ್‌ ರಾಜಕಾರಣ ಹಾಗೂ ಮಥುರಾ, ಕಾಶಿಯಲ್ಲಿರೊ ದೇವಾಲಯಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಕಳೆದ ಬಾರಿ 2022ರ ಆಗಸ್ಟ್‌ನಲ್ಲಿ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನ ಬೆಳೆಸೋ ನಿಟ್ಟಿನಲ್ಲಿ ಮೊದಲ ಬಾರಿ RSS ಹಾಗೂ ಮುಸ್ಲಿಂ ಮುಖಂಡರು ಕ್ಲೋಸ್ಡ್‌ ಡೋರ್‌ ಮೀಟಿಂಗ್‌ ಮಾಡಿದ್ರು.

-masthmagaa.com

Contact Us for Advertisement

Leave a Reply