ನಾವು ಹಿಂದೂಗಳಾಗಿದ್ದರಿಂದ ಮುಸ್ಲಿಮರು ಆರಾಮಾಗಿದ್ದಾರೆ: ಮೋಹನ್ ಭಾಗವತ್

ಜಗತ್ತಿನಲ್ಲೇ ಅತ್ಯಂತ ಸುಖವಾಗಿರುವ ಮುಸ್ಲಿಮರು ಭಾರತದಲ್ಲಿ ಇದ್ದಾರೆ. ಯಾಕಂದ್ರೆ ನಾವು ಹಿಂದೂಗಳು ಅಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಒಡಿಶಾದಲ್ಲಿ ಬುದ್ಧಿಜೀವಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಅನ್ನೋದು ಒಂದು ಧರ್ಮ ಅಥವಾ ಭಾಷೆ ಅಲ್ಲ. ಹಿಂದು ಅನ್ನೋದು ಭಾರತದಲ್ಲಿ ವಾಸಿಸುವ ಎಲ್ಲಾ ಜನರ ಸಂಸ್ಕøತಿಯಾಗಿದೆ. ಎಲ್ಲವನ್ನು, ಎಲ್ಲರನ್ನೂ ಒಪ್ಪಿಕೊಂಡು, ಗೌರವಿಸುವ ಸಂಸ್ಕøತಿ ಅಂತ ಹೇಳಿದ್ದಾರೆ. ಯಹೂದಿಗಳು ಅಲೆದಾಡುತ್ತಿದ್ದಾಗ ಅವರಿಗೆ ಆಶ್ರಯ ಕೊಟ್ಟ ಏಕೈಕ ದೇಶವೆಂದರೆ ಅದು ಭಾರತ. ಪಾರ್ಸಿಗಳು ತನ್ನ ಧಾರ್ಮಿಕ ಆಚರಣೆಗಳನ್ನು ನಡೆಸಲು ಭಾರತದಲ್ಲಿ ಮಾತ್ರವೇ ಮುಕ್ತ ಅವಕಾಶವಿದೆ. ಅದೇ ರೀತಿ ಇಡೀ ಜಗತ್ತಿನಲ್ಲಿ ತುಂಬಾ ಸಂತೋಷದಿಂದ ಇರುವ ಮುಸ್ಲಿಮರು ಸಿಗೋದು ಕೂಡ ಭಾರತದಲ್ಲಿ. ಯಾಕಂದ್ರೆ ನಾವೆಲ್ಲರೂ ಹಿಂದೂಗಳು ಎಂದಿದ್ದಾರೆ.

Contact Us for Advertisement

Leave a Reply