ಗಾಂಧೀಜಿ ಇದ್ದಿದ್ರೆ RSS ಸೇರ್ತಿದ್ರು: ಬಿಜೆಪಿ ನಾಯಕ

ರಾಜ್ಯಸಭೆ ಸಂಸದ, ಬಿಜೆಪಿ ನಾಯಕ ರಾಕೇಶ್ ಸಿಂಹ ಗಾಂಧೀಜಿ ಕುರಿತು ದೊಡ್ಡ ಹೇಳಿಕೆ ನೀಡಿದ್ದಾರೆ. ಇವತ್ತು ಗಾಂಧೀಜಿ ಬದುಕಿದ್ದರೆ RSS ಸೇರಿರುತ್ತಿದ್ದರು ಅಂತ ಹೇಳಿದ್ದಾರೆ. ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಿಯವರ ಫೋಟೋ ಮತ್ತು ಹೆಸರು ಬಳಸುತ್ತಿರುವವರೇ ಗಾಂಧೀಜಿಗೆ ವಿಚಾರಧಾರೆಗಳಿಗೆ ವಿರುದ್ಧವಾಗಿದ್ದಾರೆ. ಮಹಾತ್ಮ ಗಾಂಧೀಜಿ ಆರ್‍ಎಸ್‍ಎಸ್ ವಿಚಾರಧಾರೆಗಳ ಪಕ್ಕಾ ಅನುಯಾಯಿಯಾಗಿದ್ದರು. ಒಂದು ವೇಳೆ ಇಂದು ಗಾಂಧೀಜಿಯವರು ಬದುಕಿದ್ದರೆ ಖಂಡಿತ ಅವರು ರಾಷ್ಟ್ರೀಯ ಸ್ವಯಂ ಸಂಘದಲ್ಲಿ ಇರುತ್ತಿದ್ದರು ಎಂದು ರಾಕೇಶ್ ಸಿಂಹ ಹೇಳಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ ಆಗಿರುವ ರಾಕೇಶ್, ಸಂಘದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಕೇಶವ್ ಬಲಿರಾಮ್ ಹೆಡ್ಗೇವರ್ ಅವರ ಕುರಿತು ಹಲವು ಬುಕ್‍ಗಳನ್ನೂ ಬರೆದಿದ್ದಾರೆ.

Contact Us for Advertisement

Leave a Reply