ರಷ್ಯಾ ಸೇನಾ ವಾಹನಗಳ ಮೇಲೆ ‘Z‘ ಸಿಂಬಲ್​! ಏನಿದರ ಅರ್ಥ ಗೊತ್ತಾ?

masthmagaa.com:

ಇನ್ನು ಯುಕ್ರೇನ್​ಗೆ ರಷ್ಯಾ ಕಳಿಸ್ತಿರೋ ಸೇನಾ ವಾಹನಗಳ ಮೇಲೆ, ಟ್ಯಾಂಕ್​ಗಳ ಮೇಲೆ ಇಂಗ್ಲಿಷ್​ನ ಝೀ​ ಲೆಟರ್ ಅನ್ನ ವೈಟ್​​ ಪೇಂಟ್​​ನಲ್ಲಿ ಬರೆದಿರೋದು ಕಾಣ್ತಿದೆ. ಝೀ​ ಅಂದ್ರೆ ಏನು ಅನ್ನೋ ಪ್ರಶ್ನೆ ಎದ್ದಿದೆ. ಪುಟಿನ್​ ಏನಾದ್ರೂ ಈ ಕಾರ್ಯಾಚರಣೆಗೆ ಆಪರೇಷನ್​ ಝೀ​ ಅನ್ನೋ ಹೆಸರನ್ನ ಇಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಕೆಲವೊಂದು ವಾಹನಗಳಲ್ಲಿ ಝೀ ಪಕ್ಕದಲ್ಲಿ ಒಂದು ಸರ್ಕರ್​ ಅದರೊಳಗೆ ಮೂರು ಚುಕ್ಕೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಒಂದ್ವೇಳೆ ದೊಡ್ಡ ಪ್ರಮಾಣದಲ್ಲಿ ಯುದ್ಧ ಏನಾದ್ರೂ ನಡೆದ್ರೆ ರಷ್ಯಾ ಸೇನೆ ಮಿಸ್ಸಾಗಿ ತಮ್ಮನ್ನ ತಾವೇ ಹೊಡೆದುಕೊಳ್ಳೋದು ಆಗಬಾರ್ದು, ಮಿಸ್​​ ಫೈರ್ ಆಗಬಾರ್ದು ಅನ್ನೋ ಕಾರಣಕ್ಕೆ ಹೀಗೆ ಮಾರ್ಕ್ ಮಾಡಿರಬಹುದು ಅಂತ ಮಿಲಿಟರಿ ತಜ್ಞರು ಹೇಳಿದ್ದಾರೆ. ಯಾಕಂದ್ರೆ ಯುಕ್ರೇನ್ ಬಳಿ ಇರೋ ಟ್ಯಾಂಕ್​ಗಳು ಕೂಡ ರಷ್ಯಾದ ಟ್ಯಾಂಕ್​ಗಳ ಥರನೇ ಇದೆ. ಹೀಗಾಗಿ ಈಥರ ಮಾಡಲಾಗಿದೆ. 1990ರಲ್ಲಿ ಗಲ್ಫ್​ ಯುದ್ಧದ ಟೈಮಲ್ಲಿ ಕುವೈಟ್​ ಮೇಲೆ ಇರಾಕ್​ ಸೇನೆ ಆಕ್ರಮಣ ಮಾಡಿದಾಗ, ಕುವೈಟ್​ ನೆರವಿಗೆ ಧಾವಿಸಿದ್ದ ಅಮೆರಿಕ ಮತ್ತು ಯುಕೆ ಕೂಡ ಇಂಥದ್ದೇ ಉಪಾಯ ಕಂಡು ಹಿಡಿದಿದ್ವು. ಆಗ ಅಮೆರಿಕ ಮತ್ತು ಯುಕೆಯ ಸೇನಾ ವಾಹನ ಮತ್ತು ಟ್ಯಾಂಕ್​​ಗಳ ಮೇಲೆ ಇಂಗ್ಲಿಷ್​ನ ವಿ ಲೆಟರ್​​ ಉಲ್ಟಾ ಮಾಡಿ ಪೇಂಟ್​ ಮಾಡಲಾಗಿತ್ತು. ಸೋ ರಷ್ಯಾ ಕೂಡ ಹಾಗೇ ಮಾಡಿರೋದು ನೋಡಿದ್ರೆ ರಷ್ಯಾ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಂಪ್ಲೀಟ್​ ರೆಡಿಯಾಗಿಬಿಟ್ಟಿದೆ ಅನ್ನೋಥರ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply