ರಷ್ಯಾದಿಂದ 20 ಪಟ್ಟು ಹೆಚ್ಚು ತೈಲ ಖರೀದಿಸಿದ ಭಾರತ!

masthmagaa.com:

ಕಳೆದ ವರ್ಷ ಭಾರತಕ್ಕೆ ಮಾರಿರೋ ತೈಲ ಪ್ರಮಾಣ 20 ಪಟ್ಟಿಗಿಂತ ಜಾಸ್ತಿ ಏರಿಕೆಯಾಗಿದೆ ಅಂತ ರಷ್ಯಾ ಹೇಳಿದೆ. ರಷ್ಯಾ- ಯುಕ್ರೇನ್‌ ಯುದ್ಧವನ್ನ ವಿರೋಧಿಸಿ ಯುರೋಪ್‌ ರಾಷ್ಟ್ರಗಳು ರಷ್ಯಾ ಬಳಿ ತೈಲ ಖರೀದಿ ನಿಲ್ಲಿಸಿದ ಕಾರಣ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಮಾರಾಟ ಮಾಡಲಾಗಿದೆ. ನಮ್ಮಇಂಧನ ಮಾರಾಟಕ್ಕೆ ನಾವು ನಮ್ಮ ಮಿತ್ರ ರಾಷ್ಟ್ರಗಳ ಕಡೆ ತಿರುಗಿದ್ದೇವೆ. ಕಳೆದ ವರ್ಷ ಭಾರತಕ್ಕೆ ಮಾರಾಟವಾದ ತೈಲದ ಪ್ರಮಾಣದಲ್ಲಿ 22 ಪಟ್ಟು ಹೆಚ್ಚಾಗಿದೆ ಅಂತ ರಷ್ಯಾ ಉಪಪ್ರಧಾನಿ ಅಲೆಕ್ಸಾಂಡರ್‌ ನೊವಾಕ್‌ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply