ಭಾರತಕ್ಕೆ ಶೀಘ್ರ ಬರಲಿದೆ ಎಲ್ಲಾ ಕಂತಿನ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ!

masthmagaa.com:

ರಷ್ಯಾ ಜೊತೆಗೆ ಭಾರತ ಮಾಡಿಕೊಂಡಿರೋ ಬಹುನಿರೀಕ್ಷಿತ ರಕ್ಷಣಾ ಒಪ್ಪಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಪೂರ್ಣ ಕಂತು ಭಾರತಕ್ಕೆ ಶೀಘ್ರ ಬರಲಿದೆ ಅಂತ ಮೂಲಗಳು ತಿಳಿಸಿವೆ. ಎಸ್‌ 400ನ ಮೊದಲ ಬ್ಯಾಚ್ ಈಗಾಗಲೇ ಅಂದ್ರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದಿದೆ. ಎರಡನೇ ಬಾಕಿ ಈ ವರ್ಷದ ಅಂತ್ಯಕ್ಕೆ ಭಾರತದ ಕೈಸೇರಲಿದೆ. ಇನ್ನುಳಿದ ಸಂಪೂರ್ಣ ಬ್ಯಾಚ್‌ಗಳು ಮುಂದಿನ ವರ್ಷ ಅಂದ್ರೆ 2023ಕ್ಕೆ ಭಾರತದ ಬತ್ತಳಿಕೆ ಸೇರಲಿವೆ ಅಂತ ಹೇಳಲಾಗ್ತಿದೆ. ಅತ್ತ ಈಗಾಗಲೇ ರಷ್ಯಾದಿಂದ ಎಸ್400 ಖರೀದಿಸಿ ಅಮೆರಿಕದಿಂದ ಕೆಲ ನಿರ್ಬಂಧಗಳನ್ನ ಕೂಡ ಫೇಸ್‌ ಮಾಡ್ತಿರೋ ಟರ್ಕಿ ಈಗ ಎರಡನೇ ಸುತ್ತಿನ ಎಸ್‌400 ಖರೀದಿಗೆ ರಷ್ಯಾ ಜೊತೆಗೆ ಸೈನ್‌ ಕೂಡ ಮಾಡಿದೆ ಅಂತ ವರದಿಯಾಗಿದೆ. ಅಂದ್ಹಾಗೆ ಈ ಆಯುಧ ಲಾಂಗ್‌ರೇಂಜ್‌ ಮಿಸೈಲ್‌ ಸಿಸ್ಟಂ ಆಗಿದ್ದು ಈಗಿರೋ ಜಗತ್ತಿನ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಂತ ಕರೆಸಿಕೊಂಡಿದೆ. ಒಳಬರುವ ಶತ್ರು ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು 400 ಕಿಲೋ ಮೀಟರ್‌ ವ್ಯಾಪ್ತಿಯೊಳಗೆ ನಾಶಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಸುಮಾರು 600 ಕಿ.ಮೀ. ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಕೂಡ ಹೊಂದಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply