ಸಿರಿಯಾ ಮೇಲೆ ದಾಳಿ ಮಾಡದಂತೆ ಟರ್ಕಿಗೆ ರಷ್ಯಾ ಉಪದೇಶ!

masthmagaa.com:

ಹೇಳೊದು ಆಚಾರ ತಿನ್ನೋದು ಬದನೆಕಾಯಿ ಅನ್ನೋದು ಗಾದೆಮಾತು. ಆದ್ರೆ ರಷ್ಯಾ ಈಗ ಬದನೆಕಾಯಿ ತಿನ್ಕೊಂಡೆ ಟರ್ಕಿಗೆ ಆಚಾರ ಹೇಳ್ತಿದೆ. ಕುರ್ದಿಷ್‌ ಉಗ್ರರನ್ನ ಗುರಿಯಾಗಿಸ್ಕೊಂಡು ಟರ್ಕಿ ಸಿರಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸುತ್ತೆ ಅಂತ ಹೇಳ್ತಾ ಇರೋ ಬೆನ್ನಲ್ಲೇ ರಷ್ಯಾ ಟರ್ಕಿಗೆ ಉಪದೇಶ ಮಾಡಿದೆ. ಸಿರಿಯಾದಲ್ಲಿ ಈಗಾಗ್ಲೇ ಇರೋ ಕೆಟ್ಟ ಪರಿಸ್ಥಿತಿಯನ್ನ ಇನ್ನಷ್ಟು ಹಾಳು ಮಾಡೋ ಯಾವ ಕೆಲ್ಸಾನು ಟರ್ಕಿ ಮಾಡಲ್ಲ ಅಂತ ಅಂದ್ಕೊಂಡಿದೀವಿ ಅಂತ ರಷ್ಯಾ ವಿದೇಶಾಂಗ ಇಲಾಖೆ ವಕ್ತಾರೆ ಮಾರಿಯಾ ಜಖರೋವ ಹೇಳಿದ್ದಾರೆ. ಜೊತೆಗೆ ಸಿರಿಯಾದಲ್ಲಿ ಅಧಿಕೃತ ಸರ್ಕಾರ ಇಲ್ಲದ ವೇಳೆ ಈ ರೀತಿ ಮಾಡೋದು, ಸಿರಿಯಾದ ಸಾರ್ವಭೌಮತ್ವದ ಉಲ್ಲಂಘನೆಯಾಗುತ್ತೆ ಅಂತ ಹೇಳಿದ್ದಾರೆ. ಪಾಪ, ಇವ್ರು ಯುಕ್ರೇನ್‌ ಮೇಲೆ ದಾಳಿ ಮಾಡೋಕು ಮುಂಚೆ ಯುಕ್ರೇನ್‌ ಸರ್ಕಾರ ರತ್ನಗಂಬಳಿ ಹಾಕಿ ಕರೆದಿತ್ತು ಅನ್ಸುತ್ತೆ… ಬನ್ನಿ ಇಲ್ಲಿ ಆಕ್ರಮಣ ಮಾಡಿ ಅಂತ…. ಅಂದ್ಹಾಗೆ ಕಳೆದ ಒಂದು ವಾರದಿಂದ ಟರ್ಕಿ ಅಧ್ಯಕ್ಷ ರೆಸೆಪ್‌ ತಯಿಪ್‌ ಎರ್ಡೋಗನ್‌ ಸಿರಿಯಾ ಮೇಲೆ ದಾಳಿ ಮಾಡೋ ಎಚ್ಚರಿಕೆ ನೀಡ್ತಾ ಇದ್ದಾರೆ. ನಾವು ನಮ್ಮ ಬಾರ್ಡರ್‌ ಸುತ್ತ 30 ಕಿ.ಮೀ ಆಚೆ ಸೆಕ್ಯುರಿಟಿ ಜೋನ್‌ ಮಾಡ್ತೇವೆ. ಸಿರಿಯಾದ ನಗರಗಳಾದ ತಾಲ್‌ ರಿಫಾತ್‌ ಮತ್ತು ಮನ್‌ಬಿಜ್‌ಗಳನ್ನ ಕ್ಲೀನ್‌ ಮಾಡ್ತೇವೆ. ನಂತ್ರ ಸ್ಟೆಪ್‌ ಬೈ ಸ್ಟೆಪ್‌ ಒಂದೊಂದೇ ಪ್ರದೇಶ ಮುಂದಕ್ಕೆ ಹೋಗ್ತೇವೆ ಅಂತ ಹೇಳ್ತಿದ್ದಾರೆ. ಸಿರಿಯಾದ ಕುರ್ದಿಷ್‌ ಫೈಟರ್ಸ್‌ ಅದ್ರಲ್ಲೂ ಈ ಕುರ್ದಿಷ್‌ಸ್ತಾನ್‌ ವರ್ಕರ್ಸ್‌ ಪಾರ್ಟಿ(PKK) ಮತ್ತು ಪೀಪಲ್ಸ್‌ ಪ್ರೊಟೆಕ್ಷನ್‌ ಯೂನಿಟ್ಸ್‌(YPG)ನ ಫೈಟರ್ಸ್‌ ಮೇಲೆ ಮುಗಿಬೀಳೋಕೆ ಟರ್ಕಿ ಕಾಯ್ತಿದೆ.

-masthmagaa.com

Contact Us for Advertisement

Leave a Reply