ಯುಕ್ರೇನ್‌ಗೆ ಗೆಲುವು! ಮಗಳು ಬಿಡಿಸಿದ ಚಿತ್ರಕ್ಕೆ ರಷ್ಯಾದಲ್ಲಿ ಅಪ್ಪನಿಗೆ ಶಿಕ್ಷೆ!

masthmagaa.com:

ರಷ್ಯಾ- ಯುಕ್ರೇನ್‌ ಯುದ್ಧದಲ್ಲಿ ಯುಕ್ರೇನ್‌ಗೆ ಗೆಲುವು ಸಿಕ್ಕಿದೆ ಅನ್ನೊ ರೀತಿಯಲ್ಲಿ ಹುಡುಗಿಯೊಬ್ಭಳು ಒಂದು ಚಿತ್ರ ಬಿಡಿಸಿದ್ಲು. ಈಗ ಆ ಹುಡುಗಿಯ ತಂದೆಗೆ 2 ವರ್ಷ ಜೈಲು ಸಿಕ್ಷೆ ವಿಧಿಸಲಾಗಿದೆ. ಮಶಾ ಅನ್ನೋ 13 ವರ್ಷದ ಬಾಲಕಿ ಬಿಡಿಸಿರುವ ಡ್ರಾಯಿಂಗ್‌ನಲ್ಲಿ ಯುಕ್ರೇನ್‌ ಧ್ವಜದ ಮೇಲೆ ʻಯುಕ್ರೇನ್‌ಗೆ ಜಯʼ ಹಾಗೂ ರಷ್ಯಾದ ಫ್ಲಾಗ್‌ ಮೇಲೆ ʻಯುದ್ಧ ಬೇಡʼ ಅಂತ ಬರೆಯಲಾಗಿದೆ. ಈ ಚಿತ್ರವನ್ನ ಬಾಲಕಿಯ ತಂದೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ರು ಎನ್ನಲಾಗಿದೆ. ರಷ್ಯಾದ ಸೇನೆಯನ್ನ ಅವಮಾನ ಮಾಡಿದ್ದಾರೆ ಅಂತ ಆರೋಪಿಸಿ ವ್ಯಕ್ತಿಯನ್ನ ಗೃಹಬಂಧನದಲ್ಲಿ ಇರಿಸಲಾಗಿತ್ತು. ಆದ್ರೆ ಈಗ ಆ ವ್ಯಕ್ತಿ ಕಾಣೆಯಾಗಿದ್ದು, ಆತ ಎಲ್ಲಿದ್ದಾನೆ ಅನ್ನೋದ್ರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply