ಬೆಳ್ಳಂಬೆಳಗ್ಗೆ ಯುದ್ಧಕ್ಕೆ ಪುಟಿನ್​ ಆದೇಶ ಕೊಟ್ಟಿದ್ದು ಹೇಗೆ?

masthmagaa.com:

ವಿಶೇಷ ಸೇನಾ ಕಾರ್ಯಾಚರಣೆ ನಡೆಸುವಂತೆ ರಷ್ಯಾ ಸೇನೆಗೆ ಪುಟಿನ್ ಆರ್ಡರ್ ಮಾಡಿದ್ದು ಬೆಳ್ಳಂಬೆಳಗ್ಗೆ. ರಷ್ಯಾದಲ್ಲಿ ಆಗ ಮುಂಜಾನೆ, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ರಾತ್ರಿ ಸಮಯ. ಇಂಥಾ ಟೈಮಲ್ಲಿ ರಷ್ಯಾದ ಸರ್ಕಾರಿ ಮಾಧ್ಯಮದ ಕ್ಯಾಮರಾ ಮುಂದೆ ಕೂತ ಪುಟಿನ್​, ಡಾನೆಟ್ಸ್ಕ್​ ಪೀಪಲ್ಸ್ ರಿಪಬ್ಲಿಕ್​ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್​ನವರು ರಷ್ಯಾದ ನೆರವು ಕೇಳಿದ್ದಾರೆ. ಇದರ ಆಧಾರದಲ್ಲಿ ವಿಶ್ವಸಂಸ್ಥೆ ಚಾರ್ಟರ್​ನ ಆರ್ಟಿಕಲ್​ 51ರ ಏಳನೇ ಭಾಗದ ಪ್ರಕಾರ ಮತ್ತು ರಷ್ಯಾದ ಸ್ಟೇಟ್​ ಫೆಡರಲ್​ ಕೌನ್ಸಿಲ್​ನ ಅನುಮೋದನೆ ಪಡೆದು ಮತ್ತು ಫ್ರೆಂಡ್​​ಶಿಪ್​ ಹಾಗೂ ಡಾನೆಟ್ಸ್ಕ್​- ಲುಹಾನ್ಸ್ಕ್​​ ಜೊತೆ ಪರಸ್ಪರ ಮಾಡಿಕೊಂಡಿರೋ ರಕ್ಷಣಾ ಒಪ್ಪಂದದ ಅನ್ವಯ ನಾನು ವಿಶೇಷ ಸೇನಾ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದೀನಿ ಅಂತೇಳಿದ್ರು. ಜೊತೆಗೆ, ಕಳೆದ ಎಂಟು ವರ್ಷಗಳಿಂದ ಬೆದರಿಕೆ ಮತ್ತು ನರಮೇಧಕ್ಕೆ ಒಳಗಾದ ಜನರನ್ನ ರಕ್ಷಿಸುವುದು ಇದರ ಗುರಿ ಆಗಿದೆ.

ಇದಕ್ಕಾಗಿ ನಾವು ಯುಕ್ರೇನ್​ನ ನಿಶ್ಯಸ್ತ್ರೀಕರಣ ಮತ್ತು ಡಿನಾಜಿಫಿಕೇಷನ್​​ಗೆ ಶ್ರಮಿಸುತ್ತೇವೆ. ರಷ್ಯಾ ನಾಗರಿಕರು ಸೇರಿದಂತೆ ಅಲ್ಲಿನ ಜನರ ಮೇಲೆ ಹಲವು ರಕ್ತಸಿಕ್ತ ಅಪರಾಧ ಮಾಡಿದವರನ್ನ ಕೋರ್ಟ್ ಕಟಕಟೆಗೆ ತಂದು ನಿಲ್ಲಿಸ್ತೀವಿ. ಯುಕ್ರೇನ್​ ಸೈನಿಕರು ತಮ್ಮ ತಮ್ಮ ಶಸ್ತ್ರಾಸ್ತ್ರಗಳನ್ನ ಬಿಟ್ಟು ಮನೆಗೆ ಹೊರಡಿ. ಶಸ್ತ್ರಾಸ್ತ್ರಗಳನ್ನ ತ್ಯಜಿಸಿದ್ರೆ ಯುದ್ಧ ಭೂಮಿಯಿಂದ ವಾಪಸ್​ ಹೋಗಲು ನಿಮ್ಮನ್ನ ಬಿಡ್ತೀವಿ. ಇಲ್ಲದಿದ್ರೆ ಅಲ್ಲಿ ನಡೆಯೋ ರಕ್ತಪಾತಕ್ಕೆ ಯುಕ್ರೇನೇ ಜವಾಬ್ದಾರಿ ಆಗುತ್ತೆ. ಆಧುನಿಕ ಯುಕ್ರೇನ್​ನಿಂದ ನಿರಂತವಾಗಿ ಬರ್ತಿರೋ ಬೆದರಿಕೆಗಳಿಂದ ರಷ್ಯಾ ಸುರಕ್ಷಿತವಾಗಿರಲು, ಅಭಿವೃದ್ಧಿ ಹೊಂದಲು ಮತ್ತು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ನಮ್ಮ ಕಾರ್ಯಾಚರಣೆಗೆ ಯಾರಾದ್ರೂ ಅಡ್ಡಿಪಡಿಸಿದ್ರೆ ತಕ್ಷಣವೇ ಪ್ರತ್ಯತ್ತುರ ಕೊಡ್ತೀವಿ. ಮತ್ತು ನೀವು ಇತಿಹಾಸದಲ್ಲಿ ಎಂದೆಂದಿಗೂ ಎದುರಿಸದ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ.

ಈ ವಿಷಯದಲ್ಲಿ ಯಾವುದೇ ಬೆಳವಣಿಗೆಯಾದ್ರೂ ನಾವು ರೆಡಿ ಇದ್ದೀವಿ. ಇದಕ್ಕೆ ಸಂಬಂಧಪಟ್ಟ ಎಲ್ಲಾ ನಿರ್ಧಾರಗಳನ್ನ ಈಗಾಗಲೇ ತೆಗೆದುಕೊಂಡಾಗಿದೆ. ನನ್ನ ಮಾತನ್ನ ಎಲ್ಲರೂ ಕೇಳ್ತಿದ್ದೀರಿ ಅಂದುಕೊಂಡಿದ್ದೀನಿ ಅಂತ ಪುಟಿನ್​ ಹೇಳಿದ್ದಾರೆ. ಪುಟಿನ್​ ಭಾಷಣದಲ್ಲಿ ತಾವು ಮಿಲಿಟರಿ ಕಾರ್ಯಾಚರಣೆ ಮಾಡ್ತಿರೋದೇಕೆ ಅಂತ ಒಂದ್ಕಡೆ ಹೇಳಿದ್ರೆ, ಮತ್ತೊಂದುಕಡೆ ಯಾರಾದ್ರೂ ಮೂಗು ತೂರಿಸಿದ್ರೆ ಅದರ ಪರಿಣಾಮ ನೆಟ್ಟಗಿರಲ್ಲ ಅಂತ ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಕಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಪುಟಿನ್​ ತಮ್ಮ ಭಾಷಣ ಎಂಡ್​ ಮಾಡ್ತಿದ್ದಂತೇ ಯುಕ್ರೇನ್​​ ರಾಜಧಾನಿ ಕ್ವೀವ್​​ ಅಥವಾ ಕಿಯಾವ್​​ನಲ್ಲಿ ಸ್ಫೋಟದ ಸದ್ದು ಕೇಳಿಸಿದೆ.

-masthmagaa.com

Contact Us for Advertisement

Leave a Reply