ಯುಕ್ರೇನ್‌ನ ಮತ್ತೊಂದು ನಗರ ರಷ್ಯಾ ವಶಕ್ಕೆ!

masthmagaa.com:

2 ದಿನಗಳ ಕದನ ವಿರಾಮದ ಬಳಿಕ ರಷ್ಯಾ ತನ್ನ ದಾಳಿಯನ್ನ ಮತ್ತೆ ತೀವ್ರಗೊಳಿಸಿದೆ. ಇದೀಗ ರಷ್ಯಾದ ಖಾಸಗಿ ಸೇನಾ ಗುಂಪು ವ್ಯಾಗ್ನರ್‌, ಯುಕ್ರೇನ್‌ನ ಸೊಲೆಡಾರ್‌ (Soledar) ಪಟ್ಟಣದ ನಿಯಂತ್ರಣವನ್ನ ತನ್ನ ಕಂಟ್ರೋಲ್‌ಗೆ ತಗೊಂಡಿದೆ ಅಂತ ವ್ಯಾಗ್ನರ್‌ ಗುಂಪಿನ ಮುಖ್ಯಸ್ಥ ಹೇಳಿದ್ದಾರೆ. ಈ ಪಟ್ಟಣದಿಂದ ಬಖ್‌ಮುತ್‌ ಪ್ರದೇಶ ಕೇವಲ 15 ಕಿಲೋ ಮೀಟರ್‌ ದೂರದಲ್ಲಿದೆ. ಹೀಗಾಗಿ ಈ ಸೊಲೆಡಾರ್‌ ಪ್ರದೇಶವನ್ನ ಸುತ್ತಲಿನ ಪ್ರಮುಖ ಪ್ರದೇಶಗಳನ್ನ ಟಾರ್ಗೆಟ್‌ ಮಾಡೋಕೆ ಸ್ಟ್ರಾಟಜಿಕ್‌ ಪಾಯಿಂಟ್‌ ಆಗಿ ಬಳಸೋ ಯೋಜನೆಯನ್ನ ರಷ್ಯಾ ಹೊಂದಿದೆ. ಆದ್ರೆ ಈ ಬಗ್ಗೆ ಯುಕ್ರೇನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply