ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಅಂದಿಲ್ವಂತೆ ಮೋದಿ..!

ಪ್ರಧಾನಿ ಮೋದಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂದಿದ್ದು ಭಾರಿ ವಿವಾದಕ್ಕೀಡಾಗಿತ್ತು. ಇದೀಗ ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರು ಅಬ್ ಕೀ ಬಾರ್ ಟ್ರಂಪ್ ಸರ್ಕಾರ ಎಂದು ಹೇಳಿಲ್ಲ. ಬದಲಾಗಿ ಡೊನಾಲ್ಡ್ ಟ್ರಂಪ್ ಬಳಸೋ ಘೋಷವಾಕ್ಯಗಳ ಬಗ್ಗೆ ಪ್ರಸ್ತಾಪಿಸಿದ್ರು ಅಷ್ಟೆ ಅಂತ ಹೇಳಿದ್ದಾರೆ. 3 ದಿನಗಳ ವಿದೇಶ ಪ್ರವಾಸದಲ್ಲಿರುವ ಎಸ್.ಜೈಶಂಕರ್ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಅಮೆರಿಕಾ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. 2016ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಗಾದಿಯ ಅಭ್ಯರ್ಥಿಯಾಗಿದ್ದಾಗ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಅನ್ನೋ ಘೋಷವಾಕ್ಯ ಬಳಸಿದ್ದರು. ಅದನ್ನೇ ಮೋದಿ ಹೇಳಿದ್ದಾರೆ ಅಷ್ಟೆ. ಇದರಲ್ಲಿ ತಪ್ಪು ಮಾಹಿತಿ ನೀಡೋ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Contact Us for Advertisement

Leave a Reply