ಬ್ಯಾಡ್ ಬಾಯ್ ಸಲ್ಲುಗೆ `ಕೃಷ್ಣ’ ಸಂಕಷ್ಟ..! ಕೋರ್ಟ್ ಬುಲಾವ್…

ಕೃಷ್ಣಮೃಗ ಕೊಂದ ಆರೋಪ ಎದುರಿಸುತ್ತಿರುವ ಸಲ್ಮಾನ್ ಖಾನ್‍ಗೆ ಸಂಕಷ್ಟ ಎದುರಾಗಿದೆ. ನಾಳೆ(ಶುಕ್ರವಾರ) ಕೋರ್ಟ್ ಮುಂದೆ ಹಾಜರಾಗುವಂತೆ ಜೋಧ್ ಪುರ ಕೋರ್ಟ್ ಸೂಚಿಸಿದೆ. ಪ್ರಕರಣದ ವಿಚಾರಣೆ ಆರಂಭವಾಗಿ 5 ವರ್ಷಗಳು ಕಳೆದಿದ್ದು ಈವರೆಗೆ ಸಲ್ಮಾನ್ ಖಾನ್ ಒಮ್ಮೆಯೂ ಕೋರ್ಟ್‍ಗೆ ಹಾಜರಾಗಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾಯಾಧೀಶರು, ನಾಳೆ ಹಾಜರಾಗುವಂತೆ ತಿಳಿಸಿ ಎಂದು ವಕೀಲರಿಗೆ ಹೇಳಿದ್ದಾರೆ. ರಾಜಸ್ಥಾನದ ಕಂಕಣಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಸಲ್ಮಾನ್ ಖಾನ್ 2 ಕೃಷ್ಣಮಗಗಳನ್ನು ಶಿಕಾರಿ ಮಾಡಿದ್ದರು ಅನ್ನೋ ಆರೋಪ ಇದೆ. 1998ರಲ್ಲಿ ಹಮ್ ಸಾಥ್ ಸಾಥ್ ಹೇ ಸಿನಿಮಾ ಶೂಟಿಂಗ್ ವೇಳೆ ಸೈಫ್ ಆಲಿ ಖಾನ್, ತಬು ಮತ್ತು ಸೋನಾಲಿ ಬೇಂದ್ರೆ ಅವರ ಜೊತೆ ಸೇರಿಕೊಂಡು ಸಲ್ಮಾನ್ ಖಾನ್ ಈ ಕೃತ್ಯ ಎಸಗಿದ್ದರು ಎನ್ನಲಾಗಿದೆ.

Contact Us for Advertisement

Leave a Reply