“ಪಂಚ ಭಾಷೆಯಲ್ಲಿ ಬರಲಿರುವ ಸಂಚಾರಿ ವಿಜಯ್ ಅಭಿನಯದ ಪಿರಂಗಿಪುರ ಸಿನಿಮಾ!!- ನಾಳೆ ಫರ್ಸ್ಟ್ ಲುಕ್ ರಿಲೀಸ್

masthmagaa.com:

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ರವರ ಬಹುನಿರೀಕ್ಷಿತಾ ಪಿರಂಗಿಪುರ ಚಲನಚಿತ್ರದ ಮೊದಲ ಪಾತ್ರ ಪರಿಚಯದ ಒಂದು ವಿಡಿಯೋ ಮತ್ತು ಪೋಸ್ಟರ್ ಜೊತೆ “ಸೈಲೆಂಟ್ ಸ್ಟಾರ್ “ಎಂಬ ಬಿರುದನ್ನು ದಿನಾಂಕ 17ನೇ ತಾರೀಖು 6ಗಂಟೆಗೆ ಸಂಚಾರಿ ವಿಜಯ್ ರವರ ಹುಟ್ಟಿದ ದಿನದಂದು ಕೋವಿಡ್ ಪ್ರಯುಕ್ತ ಪ್ರಿಸ್ವಿಸ್ ಸ್ಟುಡಿಯೋ ಯೂಟ್ಯೂಬ್ ಚಾಲನ್ ನಲ್ಲಿ ರಿಲೀಸ್ ಮಾಡಲು ಯೋಜನೆಯನ್ನು ಹಾಕಿಕೊಂಡಿದೆ, ಇದರಲ್ಲಿ ಸಂಚಾರಿ ವಿಜಯ್ ರವರು ಕಮರಷಿಯಲ್ ಹೀರೋ ಆಗಿ 3 ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದರು.

ಚಿತ್ರತಂಡ ಶೇಕಡಾ 30% ಶೂಟಿಂಗ್ ಮುಗಿಸಿದ್ದು, ಇದಕ್ಕೆ 2 ವರ್ಷಗಳಿಂದ VFX ತಂತ್ರಜ್ಞಾನದ ಮೇಲೆ ಪ್ರಯೋಗ ಮಾಡಿ, ಕೋವಿಡ್ ಕಾಲಕ್ಕೂ ಮುಂಚೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದರು, ಉಳಿದ ಶೂಟಿಂಗ್ ಮಾಡುವಷ್ಟರಲ್ಲಿ ಕರೋನ ದಿಂದ ಚಿತ್ರೀಕರಣ ಮುಂದೂಡಲಾಗಿತ್ತು. ಜೂನ್ 14ನೇ ತಾರೀಖು ಸಂಚಾರಿ ವಿಜಯ್ ರವರು ಆಕಸ್ಮಿಕವಾಗಿ ವಿಧಿವಶರಾದರು, ಅವರ ನೆನಪಿಗಾಗಿ ಇದೇ ತಿಂಗಳು 17ನೇ ತಾರೀಖು ಚಿತ್ರತಂಡ ಒಂದು ವಿಡಿಯೋ ಮತ್ತು ಪೋಸ್ಟರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಬಹಳ ದೊಡ್ಡ ತಾರಾಗಣ ವಿದೆ, ಏಕಕಾಲದಲ್ಲಿ 5 ಭಾಷೆಗಳಲ್ಲಿ ತಯಾರಾಗುತ್ತಿರುವ, ಅತಿ ದೊಡ್ಡ ಬಜೆಟ್ನಲ್ಲಿ
ನಿರ್ಮಾಣ ಮಾಡುತ್ತಿರುವ ಬಹುತೇಕ VFX ಮತ್ತು Animation ನಿಂದ ಒಳಗೊಂಡಿರುವ ಚಿತ್ರವಾಗಿದ್ದು, ಇದರ ನಿರ್ದೇಶನ ಮತ್ತು ನಿರ್ಮಾಣದ ಹೊರೆಯನ್ನು ಪ್ರಿಸ್ವಿಸ್ ಸ್ಟುಡಿಯೋ ದ ಜನಾರ್ಧನ್ ರೆಡ್ಡಿ &ತ್ರಿಪುಲ ಕ್ರಿಯೇಷನ್ ರವರು ವಹಿಸಿಕೊಂಡಿದ್ದಾರೆ, ಸಂಚಾರಿ ವಿಜಯ್ ರವರು ವಿಧಿವಶರಾದಮೇಲೆ, ಚಿತ್ರತಂಡ ಸದ್ಯದಲ್ಲಿ ಅವರ ಪಾತ್ರಕ್ಕೆ ಅರ್ಥ ಕೊಡುವ ಪಾತ್ರದಾರಿಯನ್ನು ನಿರ್ಧರಿಸುತ್ತೇವೆ ಎಂದು ನಿರ್ದೇಶಕರಾದ ಜನಾರ್ಧನ್ ರೆಡ್ಡಿಯವರು ತಿಳಿಸಿದ್ದಾರೆ.

ಈ ಚಿತ್ರತಂಡದಲ್ಲಿ ಛಾಯಾಗ್ರಾಹಕರಾಗಿ ಕೂನಪ್ಪ ರೆಡ್ಡಿ, ಸಂಗೀತ ಶ್ಯಾಮ್ ಎಲ್ ರಾಜ್, ಸಂಕಲನ ಸುರೇಶ್ ಅರಸ್, ಕಲೆ ಬಾಲಚಂದ್ರನ್, ಸಾಹಸ ದಿನೇಶ್ ಸುಬ್ಬರಾಯನ್, VFX ಪ್ರಿಸ್ವಿಸ್ ಸ್ಟುಡಿಯೋದಲ್ಲಿ ನಡೆದಿದೆ.

-masthmagaa.com

 

Contact Us for Advertisement

Leave a Reply