masthmagaa.com:

ಬೆಂಗಳೂರು: ಕೇಂದ್ರೀಯ ಅಪರಾಧ ವಿಭಾಗ (CCB) ಪೊಲೀಸರ ಜೊತೆಗೆ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಇಂಟಲಿಜೆನ್ಸ್ ಸೆಕ್ಯುರಿಟಿ ಡಿವಿಷನ್ (ISD) ಸ್ಯಾಂಡಲ್​ವುಡ್​ ನಟ ಮತ್ತು ಲೂಸ್ ಮಾದ ಖ್ಯಾತಿಯ ಯೋಗೀಶ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಯೋಗಿ, ‘ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯ್ತು. ರಾಗಿಣಿ ಬಗ್ಗೆಯಾಗಲೀ ಅಥಾ ಬೇರೆ ಯಾರ ಬಗ್ಗೆಯೂ ನನ್ನ ಬಳಿ ಏನೂ ಕೇಳಿಲ್ಲ. ರಾಗಿಣಿ ಮತ್ತು ನನ್ನ ಜೊತೆ ಯಾವುದೇ ಸಂಬಂಧವಿಲ್ಲ. 2013ರಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದು ಬಿಟ್ಟರೆ ಅದಾದ ಬಳಿಕ ಒಂದೇ ಒಂದು ಮೆಸೇಜ್ ಮಾಡಿಲ್ಲ, ಕಾಲ್ ಮಾಡಿಲ್ಲ. ದಯವಿಟ್ಟು ರಾಗಿಣಿ ಜೊತೆ ನನ್ನ ಹೆಸರನ್ನು ಸೇರಿಸಬೇಡಿ. ನನಗೆ ಮದುವೆಯಾಗಿದೆ, ಒಂದು ವರ್ಷದ ಮಗು ಇದೆ’ ಅಂತ ಹೇಳಿದ್ದಾರೆ.

ನಾನು ಪಾರ್ಟಿ ಮಾಡಿಲ್ಲ ಅಂತ ಹೇಳಲ್ಲ. ಮಾಡಿದ್ದೀನಿ ಅದು 2012-13ರಲ್ಲಿ ಅಷ್ಟೇ. ನಾನು ಸಿಗರೆಟ್​ ಸೇದ್ತೀನಿ, ಡ್ರಿಂಕ್ಸ್ ಮಾಡ್ತೀನಿ, ಗುಟ್ಕಾ ಹಾಕ್ತೀನಿ. ಇದನ್ನು ಬಿಟ್ಟು ಬೇರೆನೂ ಅಭ್ಯಾಸ ಇಲ್ಲ. ಶ್ರೀಲಂಕಾಗೆ ರಾಜ್​ಕಪ್​ ಆಡಲು ಹೋಗಿದ್ದೆ. ಫೈನಲ್ ಮ್ಯಾಚ್​ಗೆ ಹೋಗಿ ಸೋತು ವಾಪಸ್ ಬಂದ್ವಿ. 2018ರಲ್ಲೇ ನನ್ನ ಪಾಸ್​ಪೋರ್ಟ್​ ಅವಧಿ ಮುಗಿದಿದೆ. ಐಎಸ್​ಡಿ ವಿಚಾರಣೆ ವೇಳೆ ನನ್ನ ಬಗ್ಗೆ ಮಾತ್ರ ಪ್ರಶ್ನೆ ಕೇಳಿದ್ರು. ಏನ್ ಕೇಳಿದ್ದಾರೋ ಎಲ್ಲದ್ದಕ್ಕೂ ಉತ್ತರಿಸಿದ್ದೇನೆ. ನಾನು ತಪ್ಪು ಮಾಡಿಲ್ಲ, ಹೀಗಾಗಿ ಭಯ ಪಡುವ ಅಗತ್ಯವೂ ಇಲ್ಲ’ ಅಂತ ನಟ ಯೋಗೀಶ್ ಹೇಳಿದ್ದಾರೆ.

ಮತ್ತೊಂದುಕಡೆ ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪದಡಿ ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಟ್ ಅವರನ್ನು ಇಂಟಲಿಜೆನ್ಸ್ ಸೆಕ್ಯುರಿಟಿ ಡಿವಿಷನ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದುವರೆಗೆ ಒಟ್ಟು 67 ಜನರನ್ನು ಐಎಸ್​ಡಿ ವಿಚಾರಣೆಗೆ ಒಳಪಡಿಸಿದೆ. ಇಂಟಲಿಜೆನ್ಸ್ ಸೆಕ್ಯುರಿಟಿ ಡಿವಿಷನ್ ಅನ್ನೋದು ಕರ್ನಾಟಕ ಪೊಲೀಸರ ಗುಪ್ತಚರ ಭದ್ರತಾ ವಿಭಾಗವಾಗಿದೆ.

-masthmagaa.com

Contact Us for Advertisement

Leave a Reply