ಶನಿ ಗ್ರಹದ ಮೂನ್‌ನಲ್ಲಿ ವಾಸಯೋಗ್ಯ ವಾತಾವರಣ!

masthmagaa.com:

ಭೂಮಿ ಬಿಟ್ಟು ಬೇರೆ ಗ್ರಹಗಳಲ್ಲಿ ವಾಸಯೋಗ್ಯ ವಾತಾವರಣ ಇದೆಯಾ ಅನ್ನೊ ಹುಡುಕಾಟದಲ್ಲಿ ಮತ್ತೊಂದು ಇಂಟರೆಸ್ಟಿಂಗ್‌ ವಿಚಾರ ಪತ್ತೆಯಾಗಿದೆ. ಇದೀಗ ವಿಜ್ಞಾನಿಗಳು ಶನಿ ಗ್ರಹದ ಮೂನ್‌ ಎನ್ಸಲಾಡಸ್ (Enceladus) ಜೀವಿಸೋಕೆ ಬೇಕಾದ ಯೋಗ್ಯ ವಾತವರಣವನ್ನ ಒಳಗೊಂಡಿದೆ ಅಂತ ಕಂಡುಕೊಂಡಿದ್ದಾರೆ. ಈ ಮೂನ್‌ ಜೀವಿಗಳು ಬದುಕೋಕೆ ಬೇಕಾದ ಬೇಸಿಕ್‌ ಅವಶ್ಯಕತೆಗಳನ್ನ ಹಾಗೂ ವಸ್ತುಗಳನ್ನ ಹೊಂದಿರೊ ಸಾಗರಗಳನ್ನ ಒಳಗೊಂಡಿದೆ ಅಂತ ಹೇಳಲಾಗಿದೆ. ಇದನ್ನ PNAS ಜರ್ನಲ್‌ನಲ್ಲಿ ಪಬ್ಲಿಷ್‌ ಮಾಡಲಾಗಿದೆ. ಜೀವಿಗೆ ಅಗತ್ಯವಾಗಿರೊ ಪಾಸ್ಪರಸ್‌ನ್ನ ಹೊಂದಿರೊ ಸಾಗರ ಕೂಡ ಈ ಎನ್ಸಲಾಡಸ್ ಮೂನ್‌ನಲ್ಲಿ ಇರಬಹುದು ಅಂತ ವಿಜ್ಞಾನಿಗಳು ನಂಬಿದ್ದಾರೆ. ನಮ್ಮ ಸೌರವ್ಯೂಹದಲ್ಲಿ ಜೀವನದ ಹುಡುಕಾಟದಲ್ಲಿ ಎನ್ಸಲಾಡಸ್ ಪ್ರಮುಖ ಟಾರ್ಗೆಟ್‌ ಆಗಿದೆ ಅಂತ ಸೈಂಟಿಸ್ಟ್‌ ಡಾಕ್ಟರ್‌ ಕ್ರಿಸ್ಟೋಫರ್‌ ಗ್ಲೇನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply