ಇರಾನ್ ಬಾಕ್ಸಿಂಗ್ ಚಾಂಪಿಯನ್​​ಗೆ ಮರಣ ದಂಡನೆ!

masthmagaa.com:

ಇರಾನ್​​ನಲ್ಲಿ ಕುಸ್ತಿಪಟು ನಾವಿದ್ ಅಫ್ಕಾರಿ ಬಳಿಕ ಈಗ ಬಾಕ್ಸಿಂಗ್ ಚಾಂಪಿಯನ್ ಮೇಲೂ ಮರಣ ದಂಡನೆಯ ತೂಗುಗತ್ತಿ ನೇತಾಡ್ತಾ ಇದೆ. 2019ರಲ್ಲಿ ದೇಶದಲ್ಲಿನ ಆರ್ಥಿಕ ಭ್ರಷ್ಟಾಚಾರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 26 ವರ್ಷದ ಬಾಕ್ಸಿಂಗ್ ಚಾಂಪಿಯನ್ ಮೊಹ್ಮದ್ ಜಾವಾದ್​​​​​ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಇಸ್ರೇಲ್​​ನ ಪತ್ರಿಕೆ ಜೆರುಸಲೆಂ ಪೋಸ್ಟ್​​ನಲ್ಲಿ ಈ ವರದಿ ಪ್ರಕಟವಾಗಿದೆ. ಇರಾನ್​ನಲ್ಲಿ ಈ ರೀತಿ ಕ್ರೀಡಾಪಟುಗಳನ್ನು ಗಲ್ಲಿಗೇರಿಸೋದು ಹೊಸತೇನೂ ಅಲ್ಲ.. ಈ ಹಿಂದೆ 2020ರ ಸಪ್ಟೆಂಬರ್​​ನಲ್ಲಿ 27 ವರ್ಷದ ಇರಾನ್ ಕುಸ್ತಿಪಟು ನಾವಿದ್ ಅಫ್ಕಾರಿ ಎಂಬುವವರನ್ನು ಗಲ್ಲಿಗೇರಿಸಲಾಗಿತ್ತು. 2018ರಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ವೇಳೆ ಸೆಕ್ಯೂರಿಟಿ ಗಾರ್ಡ್ ಹತ್ಯೆ ಮಾಡಿದ್ದಾರೆ ಅನ್ನೋ ಆರೋಪ ಅಫ್ಕಾರಿ ಮೇಲಿತ್ತು. ಈ ವೇಳೆ ವಿಶ್ವಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಇದಾದ ಬಳಿಕವೂ ಮತ್ತಿಬ್ಬರು ಬಾಕ್ಸಿಂಗ್ ಪಟುಗಳಿಗೆ ಇರಾನ್ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. 30 ವರ್ಷದ ಬಾಕ್ಸರ್ ಅಲಿ ಮುಟೈರಿ, ಮೆಹ್ದಿ ಅಲಿ ಹೊಸ್ಸೇನಿ ಎಂಬುವವರನ್ನು ಗಲ್ಲಿಗೇರಿಸಿತ್ತು. ಇನ್ನು ಇರಾನ್ ಪ್ರತಿ ವರ್ಷ ಹೆಚ್ಚು ಕಡ್ಮೆ 250 ಮಂದಿ ವಯಸ್ಕರನ್ನು, 100ಕ್ಕೂ ಹೆಚ್ಚು ಮಂದಿ ಮಕ್ಕಳನ್ನು ಗಲ್ಲಿಗೇರಿಸುತ್ತೆ. ಇಷ್ಟೇ ಅಲ್ಲ.. ಇಲ್ಲಿ ಕ್ರೇನ್ ಮೂಲಕ ಪಬ್ಲಿಕ್ ಪ್ಲೇಸಲ್ಲಿ ಗಲ್ಲಿಗೇರಿಸೋದು, ಕರೆಂಟ್ ಶಾಕ್ ಮೂಲಕ ಹತ್ಯೆ ಮಾಡೋದು ಕೂಡ ಮಾಡಲಾಗುತ್ತೆ.

-masthmagaa.com

Contact Us for Advertisement

Leave a Reply