ಅಪ್ರಾಪ್ತ ಬಾಲಕಿ ಮೇಲೆ ಅಪ್ತಾಪ್ತ ಬಾಲಕಿರಿಂದ ಗ್ಯಾಂಗ್ ರೇಪ್..!

ಅಪ್ರಾಪ್ತ ಬಾಲಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಓಡಿಸಿಕೊಂಡು ಹೋಗಿ, ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ರಾಜಸ್ಥಾನದ ಧೌಲಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಅಪ್ರಾಪ್ತ ಬಾಲಕಿ ದೌಲಾಪುರದ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಅದೇ ಶಾಲೆಯ 11ನೇ ತರಗತಿಯ ಬಾಲಕನೊಬ್ಬ ಸೆಪ್ಟೆಂಬರ್ 30ರಂದು ಪುಸಲಾಯಿಸಿ ಬಾಲಕಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಮೊದಲು ಜಯಪುರ, ಹಿಮಾಚಲ ಪ್ರದೇಶ ಮತ್ತು ದೆಹಲಿಗೆ ಕರೆದೊಯ್ದಿದ್ದಾರೆ.

ಬಾಲಕಿಯ ತಂದೆ ಓರ್ವ ಬಾಲಕನ ಹೆಸರು ಪ್ರಸ್ತಾಪಿಸಿ ದೌಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸುತ್ತಮುತ್ತ ತುಂಬಾ ಹುಡುಕಿದರಾದರೂ ಪೊಲೀಸರಿಗೆ ಆರೋಪಿಗಳು ಪತ್ತೆಯಾಗಲಿಲ್ಲ. ನಂತರ ಮೊಬೈಲ್ ಲೊಕೇಶನ್ ಆಧರಿಸಿ ಹುಡುಕಿದಾಗ ಪೊಲೀಸರಿಗೆ ಈ ಬಾಲಕರು ಇರೋ ಜಾಗ ಪತ್ತೆಯಾಗಿದೆ. ನಂತರ ಅಕ್ಟೋಬರ್ 2ರಂದು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಬಾಲಕಿಯನ್ನು ಮೆಡಿಕಲ್ ಚೆಕಪ್‍ಗೆ ಒಳಪಡಿಸಿ, ತನಿಖೆ ಮುಂದುವರಿಸಿದ್ದಾರೆ.

Contact Us for Advertisement

Leave a Reply