ಹಂದಿಯ ಕಿಡ್ನಿ ಮನುಷ್ಯನಿಗೆ ಜೋಡಿಸಿ, ಯಶಸ್ವಿಯಾದ ತಜ್ಞರು!

masthmagaa.com:

ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ದೇಹಕ್ಕೆ ಹಂದಿಯ ಕಿಡ್ನಿಗಳನ್ನು ಜೋಡಿಸಿ ಪ್ರಯೋಗ ನಡೆಸಲಾಗಿದೆ. ಇದು ಯಶಸ್ವಿ ಕೂಡ ಆಗಿದೆ ಅಂತ ತಜ್ಞರು ತಿಳಿಸಿದ್ದಾರೆ. ಮನುಷ್ಯನ ದೇಹಕ್ಕೆ ಪ್ರಾಣಿಗಳ ಅಂಗಗಳನ್ನು ಟ್ರಾನ್ಸ್​​ಪ್ಲಾಂಟ್ ಮಾಡಿ, ಜೀವ ಉಳಿಸಬೇಕು ಅನ್ನೋ ದಶಕಗಳ ಚಿಂತನೆಯಲ್ಲಿ ಒಂದು ಮಹತ್ವದ ಹೆಜ್ಜೆ ಇದಾಗಿದೆ. ಅಂಗಾಂಗಗಳ ಕೊರತೆ ಹಿನ್ನೆಲೆಯಲ್ಲಿ ಹಂದಿಯ ಅಂಗಗಳನ್ನು ಮನುಷ್ಯನ ದೇಹಕ್ಕೆ ಜೋಡಿಸಬಹುದಾ ಅನ್ನೋ ಬಗ್ಗೆ ನಿರಂತರವಾಗಿ ಸಂಶೋಧನೆ ನಡೀತಾನೇ ಇದೆ. ಆದ್ರೆ ಹಂದಿಯ ಜೀವಕೋಶಗಳಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇರೋದ್ರಿಂದ ಮನುಷ್ಯರ ದೇಹಕ್ಕೆ ಸೂಟ್ ಆಗ್ತಿರಲಿಲ್ಲ. ಹೀಗಾಗಿ ಇದು ಪರಕೀಯ ಅಂಗವಾಗಿ ದೇಹ ನೋಡ್ತಿತ್ತು. ಹೀಗಾಗಿ ಈ ಸಲ ಹಂದಿಯ ದೇಹದಲ್ಲಿ ಜೆನೆಟಿಕ್ ಮಾಡಿಫಿಕೇಶನ್ ಅಂದ್ರೆ ವಂಶವಾಹಿಯಲ್ಲೇ ಬದಲಾವಣೆ ಮಾಡಲಾಗಿತ್ತು. ಹೀಗೆ ಬೆಳೆಸಿದ ಹಂದಿಯ ಕಿಡ್ನಿಯನ್ನು ಮಹಿಳಾ ರೋಗಿಯೊಬ್ಬರಿಗೆ ಹೊರಗಿನಿಂದಲೇ ಅಟ್ಯಾಚ್ ಮಾಡಿ, 2 ದಿನಗಳ ಕಾಲ ಅಬ್ಸರ್ವ್​ ಮಾಡಲಾಗಿದೆ. ಈ ವೇಳೆ ಕಿಡ್ನಿ ನಾರ್ಮಲ್ ಆಗಿಯೇ ಕೆಲಸ ಮಾಡಿದೆ. ಯಾವುದೇ ರೀತಿಯ ಪ್ರತಿರೋಧ ವ್ಯಕ್ತವಾಗಲಿಲ್ಲ. ಕಿಡ್ನಿ ಮಾಡುವ ಕೆಲಸ ಅಂದ್ರೆ ರಕ್ತವನ್ನು ವೇಸ್ಟೇಟ್ ಫಿಲ್ಟರ್ ಮಾಡಿ, ಯೂರಿನ್ ಹೊರಗೆ ಕಳುಹಿಸೋ ಕೆಲಸ ಮಾಡಿದೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ ಅಂತ ತಜ್ಞರು ತಿಳಿಸಿದ್ಧಾರೆ. ಅಂದಹಾಗೆ ಎನ್​ವೈಯು ಲ್ಯಾಂಗೋನ್ ಹೆಲ್ತ್​ ಅನ್ನೋ ಸಂಸ್ಥೆ ಈ ಪ್ರಯೋಗ ನಡೆಸಿದೆ. ಮಹಿಳೆ ಅನಾರೋಗ್ಯಕ್ಕಿಡಾಗಿದ್ದು, ವೆಂಟಿಲೇಟರ್​​ನಲ್ಲಿದ್ರು. ಆಕೆಯ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ರು. ಆದ್ರೆ ಅಂಗಾಂಗ ದಾನಕ್ಕೆ ಅಂಗಗಳು ಯೋಗ್ಯವಾಗಿ ಇರಲಿಲ್ಲ. ನಂತರ ಕುಟುಂಬಸ್ಥರ ಅನುಮತಿ ಪಡೆದು ಈ ಪ್ರಯೋಗ ನಡೆಸಲಾಗಿದೆ.

17ನೇ ಶತಮಾನದಿಂದಲೂ ಮನುಷ್ಯನ ದೇಹಕ್ಕೆ ಪ್ರಾಣಿಗಳ ಅಂಗವನ್ನು ಟ್ರಾನ್ಸ್​ಪ್ಲಾಂಟ್ ಮಾಡೋ ಕನಸು ಶುರುವಾಗಿತ್ತು. 20ನೇ ಶತಮಾನದದಲ್ಲಿ ಬಬೂನ್​​ಗಳ ಅಂಗವನ್ನು ಮನುಷ್ಯನ ದೇಹಕ್ಕೆ ಟ್ರಾನ್ಸ್​ಪ್ಲಾಂಟ್ ಮಾಡೋ ಪ್ರಯತ್ನ ನಡೆದಿತ್ತು. ಸಾವಿನ ಅಂಚಿನಲ್ಲಿದ್ದ ನವಜಾತ ಶಿಶುವೊಂದಕ್ಕೆ ಬಬೂನ್​​ನ ಹಾರ್ಟ್​ ಟ್ರಾನ್ಸ್​ಪ್ಲಾಂಟ್ ಮಾಡಿದ ಬಳಿಕ ಅದು 21 ದಿನಗಳ ಕಾಲ ಬದುಕಿತ್ತು. ಆದ್ರೀಗ ಹಂದಿಗಳ ಅಗಾಂಗವನ್ನು ಮನುಷ್ಯರಿಗೆ ಜೋಡಿಸೋ ಪ್ರಯತ್ನ ಶುರುವಾಗಿದೆ. ಕೋತಿಗಳು ಮತ್ತು ಏಬ್ಸ್‌ಗಳನ್ನು ಬರೀ ಅಂಗಾಂಗ ಕಸಿಗಾಗಿ ಕೊಲ್ಲೋಕೆ ಶುರು ಮಾಡಿದ್ರೆ, ನೈತಿಕತೆಯ ಪ್ರಶ್ನೆ ಏಳುತ್ತೆ. ಆದ್ರೆ ಹಂದಿಗಳನ್ನು ಆಹಾರಕ್ಕಾಗಿ ಬೆಳೆಸಲಾಗುತ್ತೆ. ಹೀಗಾಗಿ ಅವುಗಳ ಅಂಗಾಂಗಗಳನ್ನು ಬಳಸೋದ್ರಿಂದ ಅಂತ ತಕರಾರು, ತಾಪತ್ರಯ ಎದುರಾಗೋದಿಲ್ಲ. ಬರೀ ಅಂಗಾಂಗ ಕಸಿಗಾಗಿಯೇ ಕೊಲ್ತಿದ್ದೀವಿ ಅಂತ ಅನ್ನಿಸಲ್ಲ.. ಅದೂ ಅಲ್ಲದೆ ಹಂದಿಗಳ ಅಂಗಾಂಗಗಳನ್ನು ಮನುಷ್ಯರ ಅಂಗಾಂಗಳಿಗೂ ಹೋಲಿಕೆ ಇದೆ. ಈಗಾಗಲೇ ಹಲವು ದಶಕಗಳಿಂದ ಹಂದಿಗಳ ಹೃದಯ ವಾಲ್ವ್​​ಗಳನ್ನು ಮನುಷ್ಯರಿಗೆ ಯಶಸ್ವಿಯಾಗಿ ಟ್ರಾನ್ಸ್​ಪ್ಲಾಂಟ್ ಮಾಡಲಾಗುತ್ತಿದೆ.

-masthmagaa.com

Contact Us for Advertisement

Leave a Reply