ಅಳಿದು ಹೋದ ಈ ಹುಲಿಯನ್ನ ಮತ್ತೆ ತರಲು ಮಿಲಿಯನ್‌ ಲೆಕ್ಕದಲ್ಲಿ ಖರ್ಚು! ಯಾವುದು ಆ ಹುಲಿ?

masthmagaa.com:

ವಿಜ್ಞಾನಿಗಳು ಟ್ಯಾಸ್ಮೆನಿಯನ್‌ ಹುಲಿ ಯನ್ನ ಮತ್ತೆ ಮರಳಿ ತರಬೇಕು ಅನ್ನುವ ಮಲ್ಟಿ ಮಿಲಿಯನ್ ಡಾಲರ್‌ ಯೋಜನೆಯನ್ನ ಪ್ರಾರಂಭಿಸಲು ಚಿಂತನೆ ನಡೆಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಅಮೆರಿಕಾದ ವಿಜ್ಞಾನಿಗಳು ಈ ಯೋಜನೆಯ ಕುರಿತು ಕೆಲಸ ಮಾಡ್ತಾ ಇದ್ದಾರೆ ಅಂತ ಹೇಳಲಾಗ್ತಿದೆ. ಬರೋಬ್ಬರಿ ಒಂದು ಶತಮಾನದ ಹಿಂದೆ ಅಳಿವಿನಂಚಿಗೆ ಹೋಗಿರುವ ಮಾರ್ಸ್ಪಿಯಲ್‌ ಥೈಲಾಸಿನ್‌ ಅನ್ನುವ ಪ್ರಾಣಿಯನ್ನ ಮತ್ತೆ ಮರಳಿ ತರಬೇಕು. ಹಾಗೆ ಈ ಪ್ರಾಣಿಯನ್ನ ಅದರ ತವರೂರು ಟ್ಯಾಸ್ಮೆನಿಯಾಗೆ ಪರಿಚಯಿಸಬೇಕು ಅನ್ನೋ ಉದ್ದೇಶವನ್ನ ಈ ವಿಜ್ಞಾನಿಗಳು ಇಟ್ಟು ಕೊಂಡಿದ್ದಾರೆ. ಅಂದಹಾಗೆ ಈ ಪ್ರಾಣಿಯನ್ನ ಟ್ಯಾಸ್ಮೆನಿಯನ್‌ ಹುಲಿ ಅಂತನೂ ಕರೀತಾರೆ.. ಟ್ಯಾಸ್ಮೆನಿಯನ್‌ ತೋಳ ಎಂತ ಕೂಡ ಕರೆಯುತ್ತಾರೆ.

-masthmagaa.com

Contact Us for Advertisement

Leave a Reply