ಹುಷಾರ್.. ಚಳಿಗಾಲದಲ್ಲಿ ವೇಗವಾಗಿ ಹರಡಲಿದೆ ಕೊರೋನಾ..!

masthmagaa.com:

ಚಳಿಗಾಲದಲ್ಲಿ ಕೊರೋನಾ ಹರಡುವಿಕೆಯ ವೇಗವು ಅಧಿಕವಾಗಿರುತ್ತೆ ಅಂತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ತಿಳಿಸಿದೆ. ಕೊರೋನಾ ಅನ್ನೋದು ಉಸಿರಾಟಕ್ಕೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಮಹಾಮಾರಿಯಾಗಿದೆ. ಈ ವೈರಸ್ ನಮ್ಮ ದೇಹವನ್ನು ಮೂಗು, ಬಾಯಿ ಮೂಲಕ ಸೇರುತ್ತದೆ. ಬೇಸಿಗೆಗಾಲದಲ್ಲಿ ಗಾಳಿಯಲ್ಲಿರುವ ಉಸಿರಾಟದ ಸಣ್ಣ ಸಣ್ಣ ಹನಿಗಳು ಅಥವಾ ಏರೋಸೋಲ್​ಗಳು ಸುಲಭವಾಗಿ ಆವಿಯಾಗುತ್ತದೆ. ಆದ್ರೆ ಚಳಿಗಾಲದಲ್ಲಿ ಇವು ಅಷ್ಟು ವೇಗವಾಗಿ ಆವಿಯಾಗುವುದಿಲ್ಲ. ಗಾಳಿಯಲ್ಲೇ ಗಂಟೆಗಳ ಕಾಲ ತೇಲುತ್ತಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಕೊರೋನಾ ಸೋಂಕು ಹರಡುವ ವೇಗ ಜಾಸ್ತಿಯಾಗಿರುತ್ತದೆ ಅಂತ ಕ್ಯಾಲಿಫೋರ್ನಿಯಾ ವಿವಿ ಅಧ್ಯಯನ ತಿಳಿಸಿದೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸೋದು ಉತ್ತಮ. ಕೇವಲ ಹೆಸರಿಗೆ ಮಾತ್ರ ಧರಿಸೋದಲ್ಲ. ನಿಮ್ಮ ಬಾಯಿ ಮತ್ತು ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ.

-masthmagaa.com

Contact Us for Advertisement

Leave a Reply