ಅಜಿತ್‌ ದೋವಲ್‌ ಭದ್ರತಾ ಲೋಪ! ಮೂವರು ಕಮಾಂಡೋಗಳು ಡಿಸ್‌ಮಿಸ್!

masthmagaa.com:

ಕಳೆದ ಫೆಬ್ರವರಿಯಲ್ಲಿ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಭದ್ರತೆಯಲ್ಲಿ ಸಮಸ್ಯೆ ಕಂಡುಬಂದಿತ್ತು. ಹೀಗಾಗಿ ಅವರ ಭದ್ರತೆಯಲ್ಲಿ ತೊಡಗಿದ್ದ ಸಿಐಎಸ್‌ಎಫ್ನ ಮೂವರು ಕಮಾಂಡೋಗಳನ್ನ ಕೇಂದ್ರ ಸರ್ಕಾರ ವಜಾಗೊಳಿಸಿದೆ ಅಂತ ಮಾಹಿತಿ ಬರ್ತಾಯಿದೆ. 2022ರ ಫೆಬ್ರವರಿಯಲ್ಲಿ ವ್ಯಕ್ತಿಯೊಬ್ಬ ಅಜಿತ್‌ ದೋವಲ್‌ ಅವರ ನಿವಾಸದ ಆವರಣದೊಳಕ್ಕೆ ಪ್ರವೇಶಿಸಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ತಡೆದು ನಿಲ್ಲಿಸಿದ್ರು. ದೆಹಲಿ ಪೊಲೀಸರು ಆತನನ್ನ ಬಂಧಿಸಿದ್ರು. ಇದು ದೋವಲ್‌ ಅವರ ಭದ್ರತೆಯಲ್ಲಾದ ಲೋಪ ಅಂತ ಹೇಳಲಾಗಿತ್ತು.ಇದೀಗ ಕೇಂದ್ರ ಅಧಿಕಾರಿಗಳನ್ನ ಡಿಸ್‌ ಮಿಸ್‌ ಮಾಡಿದೆ.

-masthmagaa.com

Contact Us for Advertisement

Leave a Reply