ಉಗ್ರರು ಕೊರೆದಿದ್ದ ಬಿಲವನ್ನು ಭೇದಿಸಿದ ಭದ್ರತಾ ಪಡೆಗಳು..!

masthmagaa.com:

ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಅಡಗುದಾಣವನ್ನು ಭಾರತೀಯ ಭದ್ರತಾ ಪಡೆಗಳು ಭೇದಿಸಿವೆ. ಇಲಿಗಳ ರೀತಿ ಭೂಮಿ ಕೊರೆದು ಬಿಲ ಮಾಡಿಕೊಂಡಿದ್ದ ಉಗ್ರರು ಅಡಗುದಾಣದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಶೇಖರಿಸಿಟ್ಟಿದ್ದರು. ಎಲ್ಲಾ ಶಸ್ತ್ರಾಸ್ತ್ರಗಳನ್ನ ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದು ಎಫ್​ಐಆರ್ ದಾಖಲಿಸಲಾಗಿದೆ. ಅವಂತಿಪೋರಾ ಪೊಲೀಸರು, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್​ಪಿಎಫ್ ಯೋಧರು ಸೇರಿಕೊಂಡು ಈ ಕಾರ್ಯಾಚರಣೆ ನಡೆಸಿವೆ.

ಮತ್ತೊಂದುಕಡೆ ಎರಡು AK-47 ರೈಫಲ್ ಮತ್ತು ಮದ್ದುಗುಂಡುಗಳೊಂದಿಗೆ ಬುದ್ಗಾಂನಿಂದ ಇತ್ತೀಚೆಗೆ ನಾಪತ್ತೆಯಾಗಿದ್ದ ವಿಶೇಷ ಪೊಲೀಸ್ ಅಧಿಕಾರಿ ಅಲ್ತಾಫ್ ಹಸನ್ ಭಟ್ ಪತ್ತೆಯಾಗಿದ್ದಾನೆ. ಆತ ಮತ್ತು ಆತನ ಸ್ನೇಹಿತನಿದ್ದ ಕಟ್ಟಡವನ್ನು ಭದ್ರತಾಪಡೆ್ಗಳು ಸುತ್ತುವರಿದು, ಗುಂಡಿನ ದಾಳಿ ನಡೆಸಿ ಆತನನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಆದ್ರೆ ಅಲ್ತಾಫ್ ತಪ್ಪಿಸಿಕೊಂಡಿದ್ದು, ಆತನ ಸ್ನೇಹಿತ ಸೆರೆಯಾಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply