masthmagaa.com:

ದೆಹಲಿ: ದೇಶದ ಭದ್ರತೆ, ಪ್ರಧಾನಿ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​ ಸೇರಿದಂತೆ ವಿವಿಐಪಿಗಳ ಮಾಹಿತಿ ಸಂಗ್ರಹಿಸಿಟ್ಟಿದ್ದ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್​ ಸೆಂಟರ್​ನ (NIC) ಕಂಪ್ಯೂಟರ್​ಗಳನ್ನು ಹ್ಯಾಕ್ ಮಾಡಲಾಗಿದೆ ಅಂತ ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ ಆರಂಭದಲ್ಲಿ ಈ ಕೃತ್ಯ ಎಸಗಲಾಗಿದ್ದು, ಹ್ಯಾಕ್​ ನಡೆದಿರೋದು ಬೆಂಗಳೂರಿನಿಂದ ಅಂತ ತಿಳಿದುಬಂದಿದೆ.

ಇದರ ಬೆನ್ನಲ್ಲೇ ದೆಹಲಿ ಪೊಲೀಸರ ವಿಶೇಷ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಅಂದ್ಹಾಗೆ ಹ್ಯಾಕರ್​​ಗಳು NIC ಉದ್ಯೋಗಿಗಳಿಗೆ ಒಂದು ಇ-ಮೇಲ್​ ಕಳಿಸಿದ್ದಾರೆ. ಆ ಇ-ಮೇಲ್​ನಲ್ಲಿರುವ ಲಿಂಕ್​ ಓಪನ್ ಮಾಡಿದ್ರೆ ಆ ಕಂಪ್ಯೂಟರ್​ನಲ್ಲಿ ಸೇವ್ ಆಗಿದ್ದ ಮಾಹಿತಿ ಹ್ಯಾಕರ್​ಗಳ ಕೈ ಸೇರುತ್ತಿತ್ತು. ಇಂತಹ ಇ-ಮೇಲ್ ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಅಮೆರಿಕ ಮೂಲದ ಕಂಪನಿಯಿಂದ ಬಂದಿತ್ತು ಅಂತ ಮೂಲಗಳು ತಿಳಿಸಿವೆ.

ಚೀನಾ ಮೂಲದ ಝೆನುವಾ ಡೇಟಾ ಇನ್ಫಾರ್ಮೇಶನ್​ ಸಂಸ್ಥೆಯು ಭಾರತದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸೇನಾ ಮುಖ್ಯಸ್ಥರು ಸೇರಿದಂತೆ ಸಾವಿರಾರು ಭಾರತೀಯರ ಮೇಲೆ ರಹಸ್ಯ ಕಣ್ಗಾವಲು ಇಟ್ಟಿದೆ ಅನ್ನೋ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ ಅಂಥದ್ದೇ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಬಾರಿ ಬೆಂಗಳೂರಿನಿಂದ ಹ್ಯಾಕರ್​ಗಳು ಕನ್ನ ಹಾಕಿದ್ದಾರೆ ಅನ್ನೋದು ಗಮನಾರ್ಹ.

-masthmagaa.com

Contact Us for Advertisement

Leave a Reply