ದೇಶದ್ರೋಹ ಕಾಯ್ದೆಯನ್ನ ರದ್ದು ಪಡಿಸೋದೆ ಉತ್ತಮ.. ನಿವೃತ್ತ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಅಭಿಪ್ರಾಯ

masthmagaa.com:

ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಮತ್ತು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವ ಧ್ವನಿಯನ್ನು ಅದುಮಲು ದೇಶದ್ರೋಹ ಕಾಯ್ದೆಯ ಶಿಕ್ಷಾರ್ಹ ನಿಬಂಧನೆಗಳು ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ದುರ್ಬಳಕೆಯಾಗ್ತಿದೆ. ಹೀಗಾಗಿ ಅದನ್ನು ರದ್ದುಪಡಿಸೋದು ಸೂಕ್ತ ಅಂತ ಸುಪ್ರೀಂಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿಗಳಾದ ಅಲ್ತಾಫ್ ಅಲಂ, ದೀಪಕ್ ಗುಪ್ತಾ, ಮದನ ಬಿ ಲೋಕೋರ ಮತ್ತು ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ. ಯುಎಪಿಎ ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡ ಸ್ಟಾನ್ ಸ್ವಾಮಿ ಪ್ರಕರಣವನ್ನು ಕೂಡ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ. ಈ ರೀತಿಯ ಕೇಸ್ ಹಾಕೋದ್ರಿಂದ ವಿಚಾರಣೆಯೇ ಒಂದು ಶಿಕ್ಷೆಯ ರೀತಿ ಆಗೋಗುತ್ತೆ. ಹೀಗಾಗಿ ವಿಚಾರಣೆ ನಡೆದು ದೋಷಮುಕ್ತರಾದವರಿಗೆ ಪರಿಹಾರ ನೀಡುವ ಅಗತ್ಯತೆ ಇದೆ ಅಂತ ಕೂಡ ನಿವೃತ್ತ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply