ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ ಆಸ್ಟ್ರೇಲಿಯಾ ಪ್ರಧಾನಿ!

masthmagaa.com:

ಗುಜರಾತ್‌ನ ಅಹಮದಾಬಾದ್‌ನಲ್ಲಿರೊ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಾರ್ಡರ್‌-ಗವಾಸ್ಕರ್‌ ಟೂರ್ನಿಯ ಕೊನೆಯ ಪಂದ್ಯದ ಫರ್ಸ್ಟ್‌ ಡೇ ಮ್ಯಾಚ್‌ನ್ನ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ವೀಕ್ಷಿಸಿದ್ದಾರೆ. ಈ ವೇಳೆ ಕ್ರಿಕೆಟ್‌ ಮ್ಯಾಚ್‌ ಹಾಗೂ ಉಭಯ ದೇಶಗಳ ಸಂಬಂಧಗಳ ಕುರಿತು ಅಲ್ಬನೀಸ್‌ ಮಾತಾಡಿದ್ದಾರೆ. ʻಫೀಲ್ಡ್‌ನಲ್ಲಿ ಉಭಯ ದೇಶಗಳು ವಿಶ್ವದಲ್ಲಿ ದಿ ಬೆಸ್ಟ್‌ ಟೀಂ ಆಗೋಕೆ ಸ್ಪರ್ಧೆ ಮಾಡ್ತಿವೆ. ಆದ್ರೆ ಫೀಲ್ಡ್‌ ಹೊರಗೆ ಉತ್ತಮ ಜಗತ್ತನ್ನ ನಿರ್ಮಿಸಲು ಭಾರತ-ಆಸ್ಟ್ರೇಲಿಯಾ ಪರಸ್ಪರ ಸಹಕರಿಸುತ್ತಿವೆʼ ಅಂತ ಹೇಳಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಕ್ರಿಕೆಟ್‌ ವೀಕ್ಷಣೆಯನ್ನ ಕಾಂಗ್ರೆಸ್‌ ಟೀಕಿಸಿದೆ. ತಮ್ಮದೇ ಅವಧಿಯಲ್ಲಿ ತಮ್ಮ ಹೆಸರನ್ನೇ ಇಟ್ಟಿರೋ ಸ್ಟೇಡಿಯಂನಲ್ಲಿ ಪ್ರಚಾರ ಗಿಟ್ಟಿಸ್ಕೊತ್ತಿದ್ದಾರೆ ಅಂತ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ವ್ಯಂಗ್ಯ ಮಾಡಿದ್ದಾರೆ. ಇತ್ತ ದೇಶೀಯವಾಗಿ ನಿರ್ಮಿಸಿರೊ INS ವಿಕ್ರಾಂತ್‌ ಮೊದಲ ವಿದೇಶಿ ಪ್ರಧಾನಿಗೆ ವೆಲ್‌ಕಮ್ ಮಾಡಿದೆ. ಅಲ್ಬನೀಸ್‌ ಅವ್ರಿಗೆ ವಿಕ್ರಾಂತ್‌ ವಿಮಾನವಾಹಕ ನೌಕೆಯಲ್ಲಿ ಗಾರ್ಡ್‌ ಆಫ್‌ ಆನರ್‌ ನೀಡಿ ಗೌರವಿಸಲಾಗಿದೆ.

-masthmagaa.com

Contact Us for Advertisement

Leave a Reply