ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಟೆನ್ನಿಸ್‌ ತಾರೆ ಸೆರೆನಾ ವಿಲಿಯಮ್ಸ್!

masthmagaa.com:

23 ಬಾರಿ ಗ್ರ್ಯಾಂಡ್‌ ಸ್ಲಾಮ್‌ಗಳ ಚಾಂಪಿಯನ್‌ ಆಗಿರೊ‌ ಟೆನ್ನಿಸ್‌ ತಾರೆ ಸೆರೆನಾ ವಿಲಿಯಮ್ಸ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಾದ US ಓಪನ್‌ ಬಳಿಕ ತಾವು ಟೆನ್ನಿಸ್‌ಗೆ ವಿದಾಯ ಹೇಳೊದಾಗಿ ಸೆರೆನಾ ವಿಲಿಯಮ್ಸ್‌ ಹೇಳಿದ್ದಾರೆ. 40 ವರ್ಷದ ಸೆರೆನಾ, ನಿವೃತ್ತಿ ಎಂಬ ಪದವನ್ನ ನಾನು ಯಾವತ್ತು ಇಷ್ಟಪಟ್ಟಿಲ್ಲ ಅಂತ ಹೇಳಿದ್ದಾರೆ. ಸೋ ನಾನು ಟೆನ್ನಿಸ್‌ನಿಂದ ದೂರವಾಗಿ, ನನಗೆ ಮುಖ್ಯವಾದ ಇತರ ವಿಷಯಗಳ ಕಡೆಗೆ ಕಾನ್ಸಂಟ್ರೇಟ್‌ ಮಾಡ್ತೀನಿ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply