masthmagaa.com:

ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2021 ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್​ನ ಸೆಮಿ ಫೈನಲ್​ನಲ್ಲಿ 23 ಬಾರಿಯ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಸೋತಿದ್ದಾರೆ. ಸೆರೆನಾರನ್ನ 3-6, 4-6 ನೇರ ಸೆಟ್​ಗಳೊಂದಿಗೆ ಸೋಲಿಸಿರೋ ಜಪಾನ್‌ನ ಯುವ ತಾರೆ ನವೊಮಿ ಒಸಾಕ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 23 ವರ್ಷದ ಒಸಾಕ 2019ನೇ ಸಾಲಿನಲ್ಲಿ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಕಿರೀಟ ಗೆದ್ದಿದ್ದರು. ಈಗ ಎರಡನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮಾರ್ಗರೇಟ್ ಕೋರ್ಟ್ ದಾಖಲೆಯ 24 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಈ ದಾಖಲೆಯನ್ನ ಸಮಬಲ ಮಾಡಿಕೊಳ್ಳುವ ಅವಕಾಶದಿಂದ 39 ವರ್ಷದ ಸೆರೆನಾ ವಂಚಿತರಾಗಿದ್ದಾರೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಸೆರೆನಾ ವಿಲಿಯಮ್ಸ್​ ಕಣ್ಣೀರು ಹಾಕುತ್ತಾ, ಸುದ್ದಿಗೋಷ್ಠಿಯನ್ನ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

-masthmagaa.com

Contact Us for Advertisement

Leave a Reply