masthmagaa.com:

ಆಕ್ಸ್​ಫರ್ಡ್​ ಲಸಿಕೆ ಪ್ರಯೋಗಕ್ಕೆ ಒಳಗಾದ ಚೆನ್ನೈ ಮೂಲದ 40 ವರ್ಷದ ಸ್ವಯಂ ಸೇವಕನೊಬ್ಬ ಲಸಿಕೆಯಿಂದ ತನಗೆ ಅಡ್ಡಪರಿಣಾಮಗಳಾಗಿವೆ ಗಂಭೀರ ಆರೋಪ ಮಾಡಿದ್ದಾನೆ. ಜೊತೆಗೆ ತಕ್ಷಣದಿಂದಲೇ ಲಸಿಕೆಯ ಪ್ರಯೋಗ, ಉತ್ಪಾದನೆ ಮತ್ತು ಪೂರೈಕೆಯನ್ನ ನಿಲ್ಲಿಸಬೇಕು. ತನಗಾದ ಆರೋಗ್ಯ ಸಮಸ್ಯೆಗೆ 5 ಕೋಟಿ ರೂಪಾಯಿ ಪರಿಹಾರ ಕೊಡಬೇಕು ಅಂತ ಬೇಡಿಕೆ ಇಟ್ಟಿದ್ದಾನೆ.

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ, ‘ಲಸಿಕೆಗೂ ಆತನ ಆರೋಗ್ಯದಲ್ಲಾಗಿರುವ ಏರುಪೇರಿಗೂ ಯಾವುದೇ ಸಂಬಂಧವಿಲ್ಲ. ಆತನ ಆರೋಗ್ಯ ಸಮಸ್ಯೆಗೆ ಕಂಪನಿಯನ್ನ ತಪ್ಪಾಗಿ ಹೊಣೆ ಮಾಡಲಾಗ್ತಿದೆ. ಆತನ ಆರೋಗ್ಯ ಸಮಸ್ಯೆ ಬಗ್ಗೆ ವೈದ್ಯಕೀಯ ತಂಡ ಸ್ಪಷ್ಟನೆ ಕೊಟ್ಟಿದೆ. ಆದರೂ ಆತ ಸಾರ್ವಜನಿಕರ ಮುಂದೆ ಹೋಗಿ ಕಂಪನಿಗೆ ಕೆಟ್ಟ ಹೆಸರನ್ನ ತರುತ್ತಿದ್ದಾನೆ. ಇದು ದುರುದ್ದೇಶದಿಂದ ಕೂಡಿದೆ ಅನ್ನೋದು ಗಮನಕ್ಕೆ ಬಂದಿರೋದ್ರಿಂದ ಆತನಿಂದ 100 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ನಷ್ಟ ಪರಿಹಾರವನ್ನ ಕಂಪನಿ ಬಯಸುತ್ತದೆ’ ಅಂತ ಪ್ರಕಟಣೆ ಹೊರಡಿಸಿದೆ.

ಅಂದ್ಹಾಗೆ ಲಸಿಕೆ ಪ್ರಯೋಗಕ್ಕೂ ಮುನ್ನ ಸ್ವಯಂಸೇವಕರಿಂದ ಅಗ್ರೀಮೆಂಟ್​ಗೆ ಸಹಿ ಹಾಕಿಸಿಕೊಳ್ಳಲಾಗುತ್ತೆ. ಇದರ ಪ್ರಕಾರ ಸ್ವಯಂಸೇವಕರ ಆರೋಗ್ಯದಲ್ಲಿ ಏರುಪೇರಾದ್ರೆ ಅದಕ್ಕೆ ಕಂಪನಿ ಅಥವಾ ಲಸಿಕೆ ಜವಾಬ್ದಾರಿ ಆಗಿರುವುದಿಲ್ಲ.

-masthmagaa.com

Contact Us for Advertisement

Leave a Reply