ಮಹದಾಯಿ ಜಲ ವಿವಾದದಲ್ಲಿ ಗೋವಾಗೆ ಮುನ್ನಡೆ?

masthmagaa.com:

ಮಹದಾಯಿ ಜಲ ವಿವಾದ ನ್ಯಾಯಮಂಡಳಿ ಅಂತಿಮ ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ʻಮಹದಾಯಿ ಪ್ರವಾಹ್‌ ʼ ಹೆಸರಿನಲ್ಲಿ ನದಿ ಪ್ರಾಧಿಕಾರ ರಚನೆಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೋವಾ ಸಿಎಂ ಪ್ರಮೋದ್‌ ಸಾವಂತ್‌, ಕೇಂದ್ರ ಸರ್ಕಾರದ ಈ ನಿರ್ಣಯದಿಂದ ಮಹದಾಯಿ ನದಿ ಉಳಿವಿಗಾಗಿ ಹೋರಾಡ್ತಿರುವ ಗೋವಾಗೆ ಅತಿದೊಡ್ಡ ಮೈಲಿಗಲ್ಲಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ಇದು ಗೋವಾ ಜನರಿಗೆ ದೊಡ್ಡ ಸುದ್ಧಿ. ಮಹಾದಾಯಿ ನಿರ್ವಹಣೆಗೆ ಪ್ರವಾಹ್‌ ಪ್ರಾಧಿಕಾರ ರಚಿಸಬೇಕು. ಪಣಜಿಯಲ್ಲಿಯೇ ಅದ್ರ ಕೇಂದ್ರ ಕಚೇರಿ ತೆರೆಯಬೇಕು ಅನ್ನೋದು ನಮ್ಮ ಬಹಳ ದಿನದ ಬೇಡಿಕೆಯಾಗಿತ್ತು. ಅದು ಈಗ ಈಡೇರುತ್ತಿದೆ ಅಂತ ತಿಳಿಸಿದ್ದಾರೆ. ಅಂದಹಾಗೆ ಮಹದಾಯಿ ನ್ಯಾಯಾಧಿಕರಣ ಈ ಹಿಂದೆ ತನ್ನ ತೀರ್ಪಿನಲ್ಲಿ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪಿಸಿತ್ತು. ಅದರಂತೆ ಕೇಂದ್ರ ಸಂಪುಟ ಈ ಪ್ರಾಧಿ​ಕಾರ ರಚ​ನೆಗೆ ಒಪ್ಪಿಗೆ ನೀಡಿತ್ತು. ಮೂರು ರಾಜ್ಯಗಳಿಂದ ಮೂವರು ಸದಸ್ಯರ ಜೊತೆ ಮೂರು ತಜ್ಞರು ಹಾಗೂ ಒಬ್ಬ ಅಧ್ಯಕ್ಷರು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

-masthmagaa.com

Contact Us for Advertisement

Leave a Reply