masthmagaa.com:

‘ನಿವಾರ್’ ಚಂಡಮಾರುತವು ತಮಿಳುನಾಡಿನ ಉತ್ತರ ಕರಾವಳಿ ಭಾಗದಲ್ಲಿ ದುರ್ಬಲಗೊಂಡಿದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಂದ್ರೆ ಗಂಭೀರ ಸ್ವರೂಪದ ನಿವಾರ್ ಸೈಕ್ಲೋನ್ ಈಗ ಸೈಕ್ಲಾನಿಕ್ ಸ್ಟಾರ್ಮ್​ ಹಂತಕ್ಕೆ ಬಂದಿದೆ. ಸದ್ಯ ವಾಯವ್ಯ (ಉತ್ತರ-ಪಶ್ಚಿಮ) ದಿಕ್ಕಿಗೆ ಸಾಗುತ್ತಿರುವ ಈ ಚಂಡಮಾರುತ ಮುಂದಿನ 6 ಗಂಟೆಗಳಲ್ಲಿ ಡೀಪ್ ಡಿಪ್ರೆಶನ್​ಗೆ ಹೋಗಲಿದ್ದು, ನಂತರದ 6 ಗಂಟೆಗಳಲ್ಲಿ ಡಿಪ್ರೆಶನ್​ಗೆ ಹೋಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ.

ಇಂದು ಬೆಳಗ್ಗೆ 8.30ಕ್ಕೆ ಚಂಡಮಾರುತದ ವೇಗವು ಪ್ರತಿ ಗಂಟೆಗೆ 70-80 ಕಿ.ಮೀ. ಇತ್ತು. ಸಂಜೆ 5.30ರ ವೇಳೆಗೆ ಈ ವೇಗ 50-60 ಕಿಲೋ ಮೀಟರ್​ಗೆ ಇಳಿಯಲಿದೆ. ನಾಳೆ ಬೆಳಗಿನಜಾವ 5.30ಕ್ಕೆ 20-30 ಕಿಲೋ ಮೀಟರ್​ಗೆ ಇಳಿಯಲಿದೆ. ‘ನಿವಾರ್​’ ಅಬ್ಬರಕ್ಕೆ ತಮಿಳುನಾಡಿನಲ್ಲಿ ಮೂವರು ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ನೂರಾರು ಮನೆಗಳಿಗೆ ಹಾನಿಯಾಗಿದೆ ಅಂತ ಸರ್ಕಾರ ಮಾಹಿತಿ ನೀಡಿದೆ. ಚಂಡಮಾರುತ ಪರಿಣಾಮ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆಯಾಗುತ್ತಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

-masthmaga.com

Contact Us for Advertisement

Leave a Reply