ಪ್ರಚೋದನಾಕಾರಿ ಉಡುಪು ಧರಿಸಿದ್ದರೆ, ಲೈಂಗಿಕ ಕಿರುಕುಳ ಆರೋಪ ಮಾನ್ಯವಾಗಲ್ಲ:ಕೋರ್ಟ್‌

masthmagaa.com:

ದೂರುದಾರರು ಲೈಂಗಿಕವಾಗಿ ಪ್ರಚೋದನಾಕಾರಿ ಉಡುಪು ಧರಿಸಿದ್ದರೆ, ಲೈಂಗಿಕ ಕಿರುಕುಳ ಆರೋಪ ಮೇಲ್ನೋಟಕ್ಕೆ ನಿಂತಕೊಳ್ಳುವುದಿಲ್ಲ ಅಂತ ಕೇರಳದ ಕೋರ್ಟ್‌ ಒಂದು ಹೇಳಿದೆ. ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕ ಕೂಡ ಆಗಿರೋ ಸಿವಿಕ್ ಚಂದ್ರನ್ ಅನ್ನೋರ ವಿರುದ್ದ ಬೀಚ್‌ನಲ್ಲಿ ನನಗೆ ಲೈಂಗಿಕ ಕಿರುಕುಳವಾಗಿದೆ ಅಂತ ಮಹಿಳೆಯೊಬ್ರು ದೂರು ಕೊಟ್ಟಿದ್ರು. ಆದ್ರೆ 74 ವರ್ಷದ ಆರೋಪಿ ಚಂದ್ರನ್,ತಮ್ಮ ಜಾಮೀನು ಅರ್ಜಿಯ ಜತೆಗೆ ದೂರುದಾರ ಯುವತಿಯ ಫೋಟೊಗಳನ್ನು ಕೂಡ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ರು. ಈಗ ತನ್ನ ಆದೇಶವನ್ನು ಕಾಯ್ದಿರಿಸಿರುವ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯ, ಯುವತಿಯು ‘ಲೈಂಗಿಕವಾಗಿ ಪ್ರಚೋದನಾಕಾರಿ ಉಡುಪುಗಳನ್ನು ಧರಿಸಿದ್ದರಿಂದ’ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A ಅಡಿಯಲ್ಲಿನ ಅಪರಾಧವು ಮಾನ್ಯವಾಗುವುದಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply