ಪುತ್ರನೊಂದಿಗೆ ತೆರೆ ಮೇಲೆ ಬರ್ತಾರಾ ಶಾರೂಖ್ ಖಾನ್..?

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ತುಂಬಾ ಸಮಯದಿಂದ ಬಾಲಿವುಡ್‍ನಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಅವರ ಯಾವುದೇ ಸಿನಿಮಾಗಳು ತೆರೆ ಕಂಡಿಲ್ಲ. ಹೀಗಾಗಿ ಶಾರೂಖ್ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ತಮ್ಮ ಕಿರಿಯ ಪುತ್ರ ಅಬ್ರಾಮ್ ಜೊತೆ ಸಿನಿಮಾ ಮಾಡೋ ಸುಳಿವು ಕೊಟ್ಟಿದ್ದಾರೆ.

ವಿಜ್ 88 ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು, ನಿಮ್ಮ ಮಗನೊಂದಿಗೆ ಯಾವಾಗ ಸಿನಿಮಾ ಮಾಡುತ್ತೀರಿ ಎಂದು ಶಾರೂಖ್ ಖಾನ್‍ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಅಷ್ಟೇ ಅದ್ಭುತವಾಗಿ ಉತ್ತರಿಸಿರುವ ಶಾರೂಖ್ ಖಾನ್, ಅಬ್ರಾಮ್ ಡೇಟ್ ಸಿಗುತ್ತಿದ್ದಂತೆ ಆತನೊಂದಿಗೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಯಾವ ರೀತಿ ಸಿನಿಮಾ ಮಾಡುತ್ತೀರಿ ಎಂದು ಮತ್ತೊಬ್ಬರು ಅಭಿಮಾನಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಶಾರೂಖ್ ಖಾನ್, ಹಿಟ್ ಟೈಪ್ ಸಿನಿಮಾ ಎಂದಿದ್ದಾರೆ.

Contact Us for Advertisement

Leave a Reply