ಬುಮ್ರಾಗೆ ಗಿಫ್ಟ್‌ ಕೊಟ್ಟ ಪಾಕ್‌ ಆಟಗಾರ! ಯಾಕೆ?

masthmagaa.com:

ಟೀಂ ಇಂಡಿಯಾದ ಫಾಸ್ಟ್‌ ಬೌಲರ್‌ ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ ದಂಪತಿಗೆ ಇತ್ತೀಚೆಗಷ್ಟೇ ಗಂಡು ಮಗು ಜನಿಸಿದೆ. ಪತ್ನಿ ಹೆರಿಗೆ ವೇಳೆ ಕುಟುಂಬದೊಂದಿಗೆ ಇರಲು ಬಯಸಿದ್ದ ಬುಮ್ರಾ ಅವರು ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧದ ಲೀಗ್‌ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಆದ್ರೆ ಸೂಪರ್‌-4 ಸುತ್ತಿನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಬೂಮ್ರಾ ವಾಪಸ್‌ ಆಗಿದ್ದಾರೆ. ಈ ಪಂದ್ಯದ ವೇಳೆ ಪಾಕಿಸ್ತಾನ ಬೌಲರ್‌ ಶಾಹೀನ್‌ ಅಫ್ರಿದಿ ಅವ್ರು ಬುಮ್ರಾಗೆ ಗಿಫ್ಟ್‌ ಕೊಟ್ಟು ವಿಶ್‌ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಹಲವರು ಅಫ್ರಿದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply