ಸ್ವಾಮೀಜಿ ವಿರುದ್ಧ ರೇಪ್ ಆರೋಪ ಹೊರಿಸಿದ್ದ ಯುವತಿ ಅರೆಸ್ಟ್

ಉತ್ತರ ಪ್ರದೇಶದ ಷಹಜಹಾನ್‍ಪುರದಲ್ಲಿ ಯುವತಿ ಮೇಲೆ ಮಾಜಿ ಸಚಿವ, ಬಿಜೆಪಿ ನಾಯಕ ಚಿನ್ಮಯಾನಂದ ಸ್ವಾಮಿ ಅರೆಸ್ಟ್ ಆಗಿ ಜೈಲಿನಲ್ಲಿದ್ದಾರೆ. ಆದ್ರೆ ಈ ಕೇಸ್‍ನಲ್ಲಿ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ಯುವತಿಯನ್ನು ಅರೆಸ್ಟ್ ಮಾಡಲಾಗಿದೆ. ಸುಲಿಗೆ ಆರೋಪದ ಅಡಿಯಲ್ಲಿ ಸ್ಥಳೀಯ ನ್ಯಾಯಾಲಯ ವಿದ್ಯಾರ್ಥಿನಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಯುವತಿ ವಿರುದ್ಧ ಸುಲಿಗೆ ಆರೋಪವಿದ್ದು, ಈ ಸಂಬಂಧ ವಿಡಿಯೋ ಕೂಡ ಬಿಡುಗಡೆಯಾಗಿತ್ತು. ಹೀಗಾಗಿ ಇಂದು ಬೆಳಗ್ಗೆ ಯುವತಿಯನ್ನು ಮೆಡಿಕಲ್ ಚೆಕಪ್‍ಗೆ ಕರೆದೊಯ್ದ ಎಸ್‍ಐಟಿ ತಂಡ, ನಂತರ ಅರೆಸ್ಟ್ ಮಾಡಿದೆ. ಮನೆಯಲ್ಲಿದ್ದ ಯುವತಿಯನ್ನು ಚಪ್ಪಲಿ ಹಾಕೋಕೂ ಬಿಡದೇ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಯುವತಿ ಬಂಧನದಿಂದ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನಾಳೆ ನಡೆಸೋದಾಗಿ ಕೋರ್ಟ್ ಕೂಡ ಹೇಳಿತ್ತು. ಆದ್ರೆ ಒಂದು ದಿನ ಮುನ್ನವೇ ಎಸ್‍ಐಟಿ ತಂಡ ಯುವತಿಯನ್ನು ಅರೆಸ್ಟ್ ಮಾಡಿದೆ.

ಸದ್ಯ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಬಂಧಿಯಾಗಿರೋ ಚಿನ್ಮಯಾನಂದ ಸ್ವಾಮಿ, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Contact Us for Advertisement

Leave a Reply