ಶಂಕರ್ ಗೆ ಟಿಕೆಟ್ ಕೊಡ್ಬೇಡಿ..ರಾಣೆಬೆನ್ನೂರಲ್ಲಿ ಟಿಕೆಟ್ ಫೈಟ್..!

ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಆರ್.ಶಂಕರ್‍ಗೆ ಬಿಜೆಪಿ ಟಿಕೆಟ್ ಕೊಡಬೇಡಿ. ಒಂದ್ವೇಳೆ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಅಂತ ಬಸವರಾಜ್ ಕೇಲಗಾರ ಹೇಳಿದ್ದಾರೆ. ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಇಂಥಾ ಟೈಮಲ್ಲಿ ಶಂಕರ್‍ಗೆ ಟಿಕೆಟ್ ಕೊಡಬೇಡಿ. ಅನರ್ಹ ಶಾಸಕರೇನು ಸ್ವತಂತ್ರ ಹೋರಾಟಗಾರರಲ್ಲ. ಅವರು ಆಸೆ, ಆಕಾಂಕ್ಷೆ ಇಟ್ಟುಕೊಂಡೇ ರಾಜೀನಾಮೆ ಕೊಟ್ಟಿದ್ದರು. ಮಂತ್ರಿ, ಎಂಎಲ್‍ಸಿ, ನಿಗಮ ಮಂಡಳಿಯ ಬೇಡಿಕೆ ಮುಂದಿಟ್ಟಿದ್ದರು. ಅವರೇನೂ ತ್ಯಾಗ ಮಾಡಿಲ್ಲ ಅಂತ ಹೇಳಿದ್ದಾರೆ. ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಹೀಗಾಗಿ ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ನೀಡುತ್ತೆ ಅನ್ನೋ ವಿಶ್ವಾಸ ಇದೆ. ಟಿಕೆಟ್ ಕೊಡದಿದ್ದರೂ ಪಕ್ಷೇತರವಾಗಿ ನಿಲ್ಲುವುದಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.

Contact Us for Advertisement

Leave a Reply