ಶರತ್ ಬೆಂಬಲಿಗರು ಕೆಂಡ..ಬಿಎಸ್‍ವೈಗೆ ಹೊಸ ಟೆನ್ಶನ್..!

ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ಗಾಗಿ ಶರತ್ ಬಚ್ಚೇಗೌಡ ಲಾಬಿ ಶುರು ಮಾಡಿದ್ದಾರೆ. ಇವತ್ತು ಬೆಂಗಳೂರಿನ ಡಾಲರ್ಸ್ ಕಾಲೋನಿಯಲಿಲೊರುವ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಬೆಂಬಲಿಗರು ಭೇಟಿ ನೀಡಿದ್ದಾರೆ. ಅಲ್ಲದೆ ಶರತ್ ಬಚ್ಚೇಗೌಡಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ. ಆದ್ರೆ ಅಪಾರ ಸಂಖ್ಯೆಯ ಬೆಂಬಲಿಗರನ್ನು ಪೊಲೀಸರು ತಡೆದು ಕೇವಲ ಐವರನ್ನು ಮಾತ್ರ ಯಡಿಯೂರಪ್ಪ ನಿವಾಸದೊಳಗೆ ಬಿಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಶರತ್ ಬಚ್ಚೇಗೌಡ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಹೊಸಕೋಟೆಯಲ್ಲಿ ಪಕ್ಷ ಕಟ್ಟಿದ್ದು ನಾವು, ಈಗ ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಡಬೇಡಿ ಎಂದು ಕೆಂಡಕಾರಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮನೆಗೆ ಬಿಗಿಭದ್ರತೆ ಏರ್ಪಡಿಲಾಗಿದೆ. ಇನ್ನು ಎಂಟಿಬಿ ನಾಗರಾಜ್ ಕೂಡ ಯಡಿಯೂರಪ್ಪರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ.

Contact Us for Advertisement

Leave a Reply