ಹೌಡಿ ಮೋದಿ..ಕಾಂಗ್ರೆಸ್‍ಗೆ ಉರಿ..! ಶಶಿ ತರೂರ್‍ಗೆ ಟ್ರೋಲ್

ಅಮೇರಿಕಾದ ಹೂಸ್ಟನ್‍ನಲ್ಲಿ ನಡೆದ ಹೌಡಿ ಮೋದಿಯಲ್ಲಿ ಮೋದಿ ಅಬ್ಬರ ಹೇಗಿತ್ತು ಅಂತ ನೀವೆಲ್ಲಾ ನೋಡಿದ್ದೀರಿ. ಆದ್ರೆ ಇದು ವಿಪಕ್ಷ ಕಾಂಗ್ರೆಸ್‍ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಮ್ಮ ನಾಯಕರಿಗೂ ಸಹ ಅಂತಹ ಇದೇ ರೀತಿ ಬೆಂಬಲ ಸಿಕ್ಕಿತ್ತು ಅಂತ ಹೇಳುವಾಗ ಶಶಿ ತರೂರ್ ಎಡವಟ್ಟು ಮಾಡಿಕೊಂಡಿದ್ದಾರೆ. 1954ರಲ್ಲಿ ನೆಹರು ಮತ್ತು ಇಂದಿರಾ ಗಾಂಧಿ ಅಮೆರಿಕಾಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಯಾವುದೇ ವಿಶೇಷ ಪಿಆರ್ ಅಭಿಯಾನ, NRI ಜನಸಮೂಹ ನಿರ್ವಹಣೆ ಅಥವಾ ಹೈಪ್-ಅಪ್ ಮಾಧ್ಯಮ ಪ್ರಚಾರವಿಲ್ಲದೆ, ಅಮೆರಿಕಾದ ಸಾರ್ವಜನಿಕರು ಭಾರಿ ಉತ್ಸಾಹ, ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಟ್ವೀಟ್‍ನಲ್ಲಿ ಇಂದಿರಾ ಅವರನ್ನು ಇಂಡಿಯಾ ಎಂದು ಹೇಳಿದ್ದಾರೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‍ಗೆ ಒಳಗಾಗುತ್ತಿದ್ದಾರೆ.

Contact Us for Advertisement

Leave a Reply