ಬೆಳಗಾವಿಯಲ್ಲಿ ಶಿವಸೇನೆ ಪುಂಡರ ಕಿರಿಕ್: ಗಡಿ ಪ್ರವೇಶಿಸಲು ಯತ್ನ

masthmagaa.com:

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಪುಂಡರ ಪುಂಡಾಟ ಜೋರಾಗಿದೆ. ಇವತ್ತು ನೂರಾರು ಸಂಖ್ಯೆಯಲ್ಲಿ ಭಗವಾ ಬಾವುಟ ಹಿಡಿದು ಬಂದ ಶಿವಸೇನೆ ಕಾರ್ಯಕರ್ತರು ರಾಜ್ಯದ ಗಡಿಯನ್ನ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನ ತಡೆಯಲು ಮುಂದಾದಾಗ ನೂಕಾಟ, ತಳ್ಳಾಟ ಉಂಟಾಗಿದೆ. ಅಂದ್ಹಾಗೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡಧ್ವಜ ಹಾರಿಸಿದ್ದಕ್ಕೆ ಶಿವಸೇನೆ ಪುಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದನ್ನ ತೆಗೆದು ಹಾಕಬೇಕು ಅಂತ ಆಗ್ರಹಿಸಿದ್ದಾರೆ ಅಂತ ಹೇಳಲಾಗ್ತಿದೆ. ಇದರ ಬೆನ್ನಲ್ಲೇ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಶನಿವಾರ ನಾವು ಬೆಳಗಾವಿಗೆ ಹೋಗಿ ದೊಡ್ಡ ಹೋರಾಟ ನಡೆಸ್ತೀವಿ. ಬೆಳಗಾವಿ ಯಾವತ್ತೂ ನಮ್ದೇ ಅಂತ ಹೇಳಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಯಿಂದ ಶಿವಸೇನೆ ಕಾರ್ಯಕರ್ತರು ಹೀಗೆ ಮಾಡ್ತಿದ್ದಾರೆ. ಕನ್ನಡ ನಾಡಿಗೆ ಏನಾದ್ರೂ ಅವಮಾನ ಮಾಡಿದ್ರೆ ಸುಮ್ನಿರಲ್ಲ. ಅಗತ್ಯಬಿದ್ರೆ ನಾನೇ ಅಲ್ಲಿಗೆ ಹೋಗಿ ಹೋರಾಟ ಮಾಡ್ತೀನಿ ಅಂತ ಹೇಳಿದ್ದಾರೆ. ಇನ್ನು ಕರವೇ ನಾರಾಯಣಗೌಡ ಮಾತನಾಡಿ, ಶಿವಸೇನೆ ಕಾರ್ಯಕರ್ತರ ಈ ಪುಂಡಾಟವನ್ನ ಸಹಿಸಿಕೊಳ್ಳಬಾರದು. ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಪೊಲೀಸರ ಕೈಯಲ್ಲಿ ಆಗದಿದ್ರೆ ನಾವು ಅವರನ್ನ ಬಡಿದು ಹೊರ ಹಾಕ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply