ಮುಂದೊಂದು ದಿನ ಶಿವಸೈನಿಕನೊಬ್ಬ ಸಿಎಂ ಆಗ್ತಾನೆ: ಉದ್ಧವ್ ಠಾಕ್ರೆ ಭವಿಷ್ಯ

ಮುಂದೊಂದು ದಿನ ಶಿವಸೈನಿಕನೊಬ್ಬ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾನೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂದರ್ಶನ ನೀಡಿರುವ ಅವರು, ಶಿವಸೇನೆಯ ಸೈನಿಕನೊಬ್ಬ ಸಿಎಂ ಆಗಬೇಕೆಂಬುದು ನಮ್ಮ ತಂದೆ ಬಾಳಾ ಸಾಹೇಬ್ ಠಾಕ್ರೆಯವರ ಆಸೆಯಾಗಿತ್ತು. ಅದೇ ರೀತಿ ನಾನು ಅವರಿಗೆ ಮಾತು ನೀಡುತ್ತಿದ್ದೇನೆ. ಮುಂದೊಂದು ದಿನ ನಮ್ಮ ಪಕ್ಷದ ವ್ಯಕ್ತಿಯೊಬ್ಬರು ಸಿಎಂ ಆಗ್ತಾರೆ ಅಂದ್ರು. ಹಾಗೆಂದ ಮಾತ್ರಕ್ಕೆ ನನ್ನ ಮಗ ಗೆದ್ದ ಕೂಡಲೇ ಸಿಎಂ ಅಥವಾ ಡಿಸಿಎಂ ಆಗಿಬಿಡ್ತಾನೆ ಎಂದರ್ಥವಲ್ಲ ಅಂದ್ರು. ಇನ್ನು ಆದಿತ್ಯ ಠಾಕ್ರೆ ಚುನಾವಣೆಗೆ ನಿಂತಿದ್ದಾನೆ ಅಂದ್ರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದರ್ಥವಲ್ಲ. ನನಗೆ ಮತ್ತು ನನ್ನ ಮಗನಿಗೆ ಸಿಎಂ ಅಥವಾ ಡಿಸಿಎಂ ಆಗಬೇಕೆಂಬ ಯಾವ ಆಸೆಯೂ ಇಲ್ಲ ಎಂದಿದ್ದಾರೆ.

ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಇದೇ ಮೊದಲ ಬಾರಿಗೆ ವ್ರೋಲಿ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ 150 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ರೆ, ಶಿವಸೇನೆ 124 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ 14 ಕ್ಷೇತ್ರಗಳಲ್ಲಿ ಇತರೆ ಮಿತ್ರ ಪಕ್ಷಗಳು ಸ್ಪರ್ಧಿಸುತ್ತಿವೆ.

Contact Us for Advertisement

Leave a Reply