ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ಶಿವತೇಜಸ್ ನಿರ್ದೇಶನ!

masthmagaa.com:

ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ ಧರ್ಮಸ್ಥಳದ ಶ್ರೀಮಂಜುನಾಥನ ಸನ್ನಿಧಿಯಲ್ಲಿ ನಡೆದಿದೆ. “ಮಳೆ” ಚಿತ್ರದ ಖ್ಯಾತಿಯ ಶಿವತೇಜಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಶ್ಮಿ ಫಿಲಂಸ್ ಮೂಲಕ ಸುಮಂತ್ ಕ್ರಾಂತಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.”

ಕಾಲಚಕ್ರ” ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಅವರು ಪ್ರಜ್ವಲ್ ದೇವರಾಜ್ ನಟನೆಯ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ನಿರ್ಮಾಣದ ಮೂರನೇ ಚಿತ್ರ. ಬರ್ಕ್ಲಿ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶಿಸಿದ್ದಾರೆ.ಅರ್ಜುನ್ ಜನ್ಯರ ಸಂಗೀತ ಈ ನೂತನ ಚಿತ್ರಕ್ಕಿರಲಿದೆ. ಸದ್ಯದಲ್ಲೇ ಚಿತ್ರದ ಬಗ್ಗೆ ಹಚ್ಚಿನ ಮಾಹಿತಿ ನೀಡುವುದಾಗಿ ಸುಮಂತ್ ಕ್ರಾಂತಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply