ಶಿವಾಜಿ ಸುರತ್ಕಲ್ 2 ಸಿನಿಮಾಗೆ ಮುಹೂರ್ತ: ಡಿಸೆಂಬರ್ ನಲ್ಲಿ ಶೂಟಿಂಗ್ ಸ್ಟಾರ್ಟ್!

masthmagaa.com:

ಇಂದು ಬೆಳಿಗ್ಗೆ ಮಲ್ಲೇಶ್ವರಮ್ ನ ಬಂಡೆಗಣೇಶ ದೇವಸ್ಥಾನದಲ್ಲಿ ಶಿವಾಜಿ ಸುರತ್ಕಲ್ 2 ಸಿನಿಮಾದ ಮುಹೂರ್ತ ಸರಳವಾಗಿ ನೆರವೇರಿದ್ದು, ಪ್ರಮುಖ ತಾರಾಗಣ, ತಂತ್ರಜ್ಞರ ತಂಡ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಇನ್ನು ಚಿತ್ರದ ತಾರಾಗಣದಲ್ಲಿ ಮಗಳು ಜಾನಕಿ ಧಾರಾವಾಹಿಯ ಮೂಲಕ ಮನೆ ಮಾತಾಗಿರುವ ರಾಕೇಶ್ ಮಯ್ಯ ಶಿವಾಜಿ ಸುರತ್ಕಲ್-2 ಚಿತ್ರದ ತಾರಾಬಳಗಕ್ಕೆ ಹೊಸ ಎಂಟ್ರಿ. ಜಸ್ಟ್ ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ, ಈ ಪಾತ್ರಕ್ಕೆ ಹಲವು ಶೇಡ್’ಗಳಿದ್ದು ಚಿತ್ರದುದ್ದಕ್ಕು ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ.


ಈ ತಂಡಕ್ಕೆ ಮತ್ತೊಂದು ಆಗಮನ, ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು ತಮ್ಮದೇ ಆದ ಶೈಲಿಯಿಂದ ಗುರುತಿಸಿಕೊಂಡಿರುವಂತಹ ಬಿಗ್ ಬಾಸ್ ಖ್ಯಾತಿಯ ವಿನಾಯಕ ಜೋಷಿ. ಈ ಚಿತ್ರದಲ್ಲಿ ಇವರದ್ದು ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ ಪಾತ್ರವಾಗಿದ್ದು ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆ.

ಇನ್ನು ಉದಯೋನ್ಮುಖ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಕುಲ್ ಅಭ್ಯಂಕರ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ನಕುಲ್ ಅಭ್ಯಂಕರ್ ಈ ಹಿಂದೆ ಕನ್ನಡ್ ಗೊತ್ತಿಲ್ಲ ಹಾಗು ಬಿಡುಗಡೆಗೆ ಸಿದ್ಧವಾಗುತ್ತಿರುವ ಲವ್ ಮಾಕ್ಟೇಲ್-2 ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದಕ್ಕು ಮೊದಲೂ ಹೆಸರಾಂತ ಸಂಗೀತ ನಿರ್ದೇಶಕರಾದ ಎ.ಆರ್.ರೆಹಮಾನ್ ಅವರ ಹತ್ತಿರ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದು ಇತ್ತಿಚೆಗೆ ಬಹಳಷ್ಟು ಹೆಸರು ಮಾಡಿದ ಪರಮ ಸುಂದರಿ ಹಾಡಿಗೆ ಸಹ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದಾರೆ.

ಇನ್ನು ಶಿವಾಜಿ ಸುರತ್ಕಲ್-2 ಚಿತ್ರದ ಚಿತ್ರೀಕರಣ ಡಿಸಂಬರ್ ತಿಂಗಳಲ್ಲಿ ಶುರುವಾಗಲಿದೆ. ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದು ಎನ್ನುವುದು ಈ ಚಿತ್ರದ ವಿಶೇಷತೆಯಾಗಿದ್ದು ರಾಧಿಕ ನಾರಾಯಣ್, ಮೇಘನ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಇವರೆಲ್ಲ ಈಗಾಗಲೇ ತಾರಾಗಣದಲ್ಲಿದ್ದು ಆಕಾಶ್ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಾಜಿ ಸುರತ್ಕಲ್-2 ಚಿತ್ರ ಮೂಡಿಬರಲಿದದೆ.

-masthmagaa.com

Contact Us for Advertisement

Leave a Reply