ಶಿವಮೊಗ್ಗದಲ್ಲಿ ಗಲಭೆ: ರಾಜಕೀಯ ಕೆಸರೆರಚಾಟ ಶುರು! ಹೇಗಿದೆ ಕಾಂಗ್ರೆಸ್‌ ಬಿಜೆಪಿ ಜಟಾಪಟಿ?

masthmagaa.com:

(ನಿನ್ನೆ ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಅನ್ನೋರ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಹಲ್ಲೆ ಮಾಡಿದ್ರು. ಇದೀಗ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ 4 ಮಂದಿಯನ್ನ ಬಂಧಿಸಲಾಗಿದೆ ಅಂತ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಇನ್ನು ಕೇಸ್‌ನ ಪ್ರಮುಖ ಆರೋಪಿ ಜಬೀವುಲ್ಲನನ್ನ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸೋಕೆ ಹೋಗಿದ್ರು. ಆದ್ರೆ ಪೊಲೀಸರ ಮೇಲೆಯೇ ಈತ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಆತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ. ಚಿಕಿತ್ಸೆ ಕೊಡಿಸಲಾಗ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅತ್ತ ಭದ್ರಾವತಿಯಲ್ಲಿ ಸುನೀಲ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದ್ದು​ ಹಲ್ಲೆ ಮಾಡಿದ ಆರೋಪಿಯನ್ನ ಮುಬಾರಕ್‌ ಅಂತ ಗುರ್ತಿಸಲಾಗಿದೆ. ತುಮಕೂರು ನಗರದಲ್ಲಿಯೂ ಸಾವರ್ಕರ್ ಫೋಟೋವನ್ನ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ನಗರದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಅನ್ನು ತಡರಾತ್ರಿ ಹರಿದಿದ್ದು ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಅಂತ ಬಿಜೆಪಿ ಒತ್ತಾಯ ಮಾಡಿದೆ.

ಇನ್ನು ಶಿವಮೊಗ್ಗದ ಜಟಾಪಟಿ ನಿರೀಕ್ಷೆ ಮಾಡಿದಂತೆ ರಾಜಕೀಯ ಪಕ್ಷಗಳ ಮಧ್ಯೆ ಕೆಸರೆರಚಾಟಕ್ಕೂ ಕೂಡ ವೇದಿಕೆಯಾಗಿದೆ. ಸಿಎಂ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ʻ ಮುಸ್ಲಿಂ ಗೂಂಡಾಗಳು ಹಿಂದೂ ಸಮಾಜದ ಮೇಲೆ ನಿರಂತರವಾಗಿ ದಾಳಿ ಮಾಡ್ತಿದ್ದಾರೆ. ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ, ಸರ್ಕಾರ ಎಲ್ಲ ಕಠಿಣ ಕ್ರಮ ತಗೆದುಕೊಳ್ಳುತ್ತೆ ಅಂತ ಹೇಳಿದ್ರು. ಇದಕ್ಕೆ ತಿರುಗೇಟು ಕೊಟ್ಟಿರೋ ಮಾಜಿ ಸಿಎಂ ಸಿದ್ದರಾಮಯ್ಯ, ʻಈಗ ಎಲ್ಲವನ್ನೂ ಕಾಂಗ್ರೆಸ್‌ ಮೇಲೆ ಆರೋಪ ಮಾಡೋ ಕಾಮಾಲೆ ರೋಗ ಬಂದಿದೆ. ಬಿಜೆಪಿ ಕಿತಾಪತಿ ಮಾಡೋಕೆ ಈ ರೀತಿ ವ್ಯವಸ್ಥೆ ಮಾಡಿದೆ. ಮುಸ್ಲಿಂರಿರೋ ಏರಿಯಾಗೆ ಸಾವರ್ಕರ್‌ ಫೊಟೋ ಯಾಕ್‌ ಹಾಕಿದ್ರಿ. ಆಯ್ತು ಹಾಕ್ಕೊಳ್ಳಿ. ಆದ್ರೆ ಟಿಪ್ಪು ಪೋಟೋ ಯಾಕ್‌ ಬೇಡ ಅಂದ್ರಿ, ಕಿತಾಪತಿ ಮಾಡೋಕೆ ತಾನೇ ಈ ರೀತಿ ಮಾಡಿದ್ದು. ಕಾಂಗ್ರೆಸ್‌ಗೂ ಇದಕ್ಕೂ ಏನ್‌ ಸಂಬಂಧ..ಈಶ್ವರಪ್ಪನಿಗೆ ಬುದ್ದಿ ಇಲ್ಲ. SDPI, PFI ಸಾಮರಸ್ಯ ಹಾಳೋ ಮಾಡ್ತಾರೆ ಅನ್ನೋ ಎವಿಡೆನ್ಸ್‌ ಇದ್ರೆ ಅದನ್ನ ಬ್ಯಾನ್‌ ಮಾಡಿ.. ನಿಮ್ಮದೇ ಸರ್ಕಾರ ಇದೆಯಲ್ಲಾ ಅಂತ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಇತ್ತ ಈ ಬಗ್ಗೆ ಪ್ರತಿಕ್ರಿಯಿಸಿರೋ ಗೃಹ ಸಚಿವ ಅರಗ ಜ್ಞಾನೇಂದ್ರ ಮುಸ್ಲಿಂ ಏರಿಯಾ ಏನು ಭಾರತದಲ್ಲಿಲ್ವಾ. ಸಿದ್ದರಾಮಯ್ಯ ಹೀಗೆ ಮಾತನಾಡಿದ್ರೆ ಪ್ರಚೋದನೆ ಆಗುತ್ತೆ. ಸಾವರ್ಕರ್ ಫೋಟೋ ಹಾಕ್ಬೇಡಿ ಅನ್ನೋದಕ್ಕೆ ಯಾರಿವ್ರು?’ ‘ಮುಸ್ಲಿಂ ಏರಿಯಾ ಅಂದ್ರೆ ಸರ್ಕಾರದ ವ್ಯಾಪ್ತಿಗೆ ಬರೋಲ್ವಾ? ಒಂದು ಸಮುದಾಯವನ್ನಓಲೈಸೋಕೆ ಸಿದ್ದರಾಮಯ್ಯ ಈ ರೀತಿ ಹೇಳಿದ್ದಾರೆ ಅಂತ ಭಾರಿ ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಶಿವಮೊಗ್ಗ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ʻಗಲಭೆಗೆ ಎರಡು ರಾಷ್ಟ್ರೀಯ ಪಕ್ಷಗಳೇ ಕಾರಣ, ಇವತ್ತು ದೇಶದಲ್ಲಿ ಪ್ರಾಮಾಣಿಕವಾಗಿ ಸ್ವಾತಂತ್ರ್ಯ ತಂದುಕೊಟ್ಟವರನ್ನು ಬಿಟ್ಟು ಬೇರೆಯವರನ್ನು ಮೆರೆಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ದೇಶ ವಿಭಜನೆಯಾಗಲು ನೆಹರು ಕಾರಣ ಅಂತಾರೆ‌. ಆದ್ರೆ ದೇಶ ವಿಭಜನೆಯಾಗಿದ್ದು ಒಳ್ಳೆಯದು ಅಂತಾ ಸರ್ಧಾರ್‌ ಪಟೇಲ್ ಹೇಳ್ತಾರೆ. ದೇಶ ವಿಭಜನೆಯಾಗಿ ಏನೇನು ಅನಾಹುತ ಆಗಬೇಕೋ ಆಯ್ತು. ವಿಭಜನೆಯಾಗದೇ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಎಲ್ಲಾ ಇಂದು ನಮ್ಮ ದೇಶದಲ್ಲೇ ಇದ್ದಿದ್ದರೆ ಈಗಿನ ಸರ್ಕಾರ ದೇಶವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ರೋ ಅಂತ ಬಿಜೆಪಿ ವಿರುದ್ದಆಕ್ರೋಶ ಹೊರಹಾಕಿದ್ದಾರೆ. ಅಲ್ದೇ ನಿನ್ನೆ ಸ್ವತಂತ್ರ ದಿನದ ಅಂಗವಾಗಿ ಕಾಂಗ್ರೆಸ್‌ ಮಾಡಿದ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ಕೊಟ್ಟ HDK, ಪಾದಯಾತ್ರೆಯ ಉದ್ದೇಶ ಹೇಳಬೇಕಲ್ವ? ಅದಕ್ಕೆ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ? 25 ಕೋಟಿ ಖರ್ಚಾಗಿದೆಯಂತೆ. ಆ ದುಡ್ಡು ಎಲ್ಲಿಂದ ಬಂತು? ಈ ರೀತಿಯ ಪಾದಯಾತ್ರೆಗಳಿಂದ ಜನರ ಸಮಸ್ಯೆ ಬಗೆಹರಿಯೊಲ್ಲ ಅಂತ ಹೇಳಿದ್ರು

-masthmagaa.com

 

Contact Us for Advertisement

Leave a Reply